February 17, 2026
Tuesday, February 17, 2026
spot_img

ಕಮಲಾ ಹ್ಯಾರಿಸ್ ಗೆ ನೀಡಲಾಗಿದ್ದ ಸೀಕ್ರೆಟ್ ಸರ್ವೀಸ್ ರಕ್ಷಣೆ ರದ್ದುಗೊಳಿಸಿದ ಅಮೆರಿಕ ಅಧ್ಯಕ್ಷ ಟ್ರಂಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಮಾಜಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ನೀಡಲಾಗಿದ್ದ ಸೀಕ್ರೆಟ್ ಸರ್ವೀಸ್ ರಕ್ಷಣೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರದ್ದುಗೊಳಿಸಿದ್ದಾರೆ.

ಶ್ವೇತಭವನದ ಅಧಿಕಾರಿಯೊಬ್ಬರು ಹೇಳಿರುವುದಾಗಿ ಶುಕ್ರವಾರ ಅಮೆರಿಕದ ಹಲವಾರು ಮಾಧ್ಯಮಗಳು ವರದಿ ಮಾಡಿದ್ದು,ಕಮಲಾ ಹ್ಯಾರಿಸ್ ಅವರ ಸೀಕ್ರೆಟ್ ಸರ್ವೀಸ್ ರಕ್ಷಣೆಯನ್ನು ರದ್ದುಗೊಳಿಸಿದ್ದಾರೆ ಎಂದು ತಿಳಿಸಿದೆ.

ಅಮೆರಿಕ ಮಾಜಿ ಅಧ್ಯಕ್ಷ ಜೋ ಬೈಡೆನ್ ಅವರು, ಕಮಲಾ ಹ್ಯಾರಿಸ್ ಅವರು ಅಧಿಕಾರದಿಂದ ನಿರ್ಗಮಿಸುವ ಮೊದಲು ಅವರಿಗೆ ರಕ್ಷಣೆ ಒದಗಿಸಲು ಸೀಕ್ರೆಟ್ ಸರ್ವೀಸ್‌ಗೆ ವ್ಯವಸ್ಥೆ ಮಾಡಿದ್ದರು.

2008 ರಲ್ಲಿ ಯುಎಸ್ ಕಾಂಗ್ರೆಸ್ ಅಂಗೀಕರಿಸಿದ ಕಾನೂನು ಪ್ರಕಾರ, ಮಾಜಿ ಉಪಾಧ್ಯಕ್ಷರು, ಅವರ ಸಂಗಾತಿ ಮತ್ತು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅವರ ಮಕ್ಕಳನ್ನು ಉಪಾಧ್ಯಕ್ಷರ ಅವಧಿ ಮುಗಿದ ನಂತರ ಆರು ತಿಂಗಳವರೆಗೆ ರಕ್ಷಿಸಲು ಸೀಕ್ರೆಟ್ ಸರ್ವೀಸ್‌ಗೆ ಅಧಿಕಾರ ನೀಡಿದೆ..

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !