April 15, 2026
Wednesday, April 15, 2026
spot_img

Viral | ಮೊಸಳೆನೂ ಬಿಟ್ಟಿಲ್ಲ ಈ ಹುಡುಗ್ರು: ರೀಲ್ಸ್ ಹುಚ್ಚು ಎಲ್ಲಿ ತನಕ ಹೋಗಿದೆ ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶದ ಶಿವಪುರಿ ನಗರದಲ್ಲಿ ಮೊಸಳೆಯೊಂದರೊಂದಿಗೆ ಯುವಕನೊಬ್ಬ ಮಾಡಿದ ಅಪಾಯಕಾರಿ ಕೃತ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾತ್ರಿ ವೇಳೆ ಬೀದಿಯಲ್ಲಿ ಕಾಣಿಸಿಕೊಂಡ ದೊಡ್ಡ ಮೊಸಳೆಯ ಬಾಲವನ್ನು ಹಿಡಿದು ರೀಲ್ಸ್ ಮಾಡಿರುವ ವಿಡಿಯೋ ಚರ್ಚೆಗೆ ಕಾರಣವಾಗಿದೆ.

ಘಟನೆ ಚಿಂತಹಾರ್ ದೇವಾಲಯದ ಸಮೀಪದ ಭುಜಾರಿಯಾ ಕೊಳದ ಬಳಿ ನಡೆದಿದೆ. ಕೊಳದಿಂದ ಹೊರಬಂದ ಮೊಸಳೆ ರಸ್ತೆ ಮೇಲೆ ಬಂದಿದ್ದರಿಂದ ಸುತ್ತಮುತ್ತಲಿನ ನಿವಾಸಿಗಳಲ್ಲಿ ಆತಂಕ ಉಂಟಾಯಿತು. ಸ್ಥಳಕ್ಕೆ ಜನರು ಕೂಡಲೇ ಜಮಾಯಿಸಿದ್ದು, ಪರಿಸ್ಥಿತಿ ಉದ್ವಿಗ್ನವಾಗಿತ್ತು.

ಇದನ್ನೂ ಓದಿ:

ಈ ವೇಳೆ ಒಬ್ಬ ಯುವಕ ಮೊಸಳೆಯ ಹತ್ತಿರ ಹೋಗಿ ಅದರ ಬಾಲವನ್ನು ಹಿಡಿದು ಆಟವಾಡಿದಂತೆ ವರ್ತಿಸಿದ್ದಾನೆ. ಈ ಕೃತ್ಯವನ್ನು ಕೆಲವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಅರಣ್ಯ ಇಲಾಖೆ ಗಮನ ಸೆಳೆದಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಘಟನೆ ಕುರಿತು ತನಿಖೆ ಆರಂಭಿಸಿದ್ದು, ಯುವಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದ್ದಾರೆ. ಕಾಡುಪ್ರಾಣಿಗಳೊಂದಿಗೆ ಇಂತಹ ಅಪಾಯಕಾರಿ ವರ್ತನೆ ತಪ್ಪು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !