February 24, 2026
Tuesday, February 24, 2026
spot_img

ಅಮೆರಿಕದ ತೆರಿಗೆ ನೀತಿ ಚೇಂಜ್: ಭಾರತದ ಮೇಲಿನ ಸುಂಕ ಇಳಿಕೆ, ಯಾವ ದೇಶಕ್ಕೆ ಎಷ್ಟಿದೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯುರೋಪಿಯನ್ ಒಕ್ಕೂಟದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಆದ ಬಳಿಕ, ಅಮೆರಿಕ ತನ್ನ ತೆರಿಗೆ ನೀತಿಯಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿದೆ. ಈ ಕ್ರಮದ ಭಾಗವಾಗಿ ಭಾರತದಿಂದ ಆಮದು ಆಗುವ ವಸ್ತುಗಳ ಮೇಲೆ ವಿಧಿಸಿದ್ದ ಹೆಚ್ಚಿನ ಸುಂಕವನ್ನು ಅಮೆರಿಕ ಗಣನೀಯವಾಗಿ ಇಳಿಕೆ ಮಾಡಿದೆ.

ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ಭಾರತ ರಷ್ಯಾದಿಂದ ಕಚ್ಚಾ ತೈಲ ಆಮದು ಮುಂದುವರಿಸಿದ್ದ ಹಿನ್ನೆಲೆಯಲ್ಲಿ ಹಾಗೂ ಪರಸ್ಪರ ತೆರಿಗೆ ವಿಚಾರದಲ್ಲಿ ಅಸಮತೋಲನ ಇದೆ ಎಂಬ ಕಾರಣ ನೀಡಿ ಅಮೆರಿಕ ಭಾರತಕ್ಕೆ ಗರಿಷ್ಠ 50 ಶೇಕಡಾ ಸುಂಕ ವಿಧಿಸಿತ್ತು. ಆದರೆ ಈಗ ಆ ನಿರ್ಧಾರವನ್ನು ಮರುಪರಿಶೀಲಿಸಿರುವ ಟ್ರಂಪ್ ಆಡಳಿತ, ಭಾರತದ ಮೇಲಿನ ಒಟ್ಟು ತೆರಿಗೆಯನ್ನು 18 ಶೇಕಡಕ್ಕೆ ಇಳಿಸುವುದಾಗಿ ಘೋಷಿಸಿದೆ.

ಇದನ್ನೂ ಓದಿ:

ಈ ತೀರ್ಮಾನದಿಂದ ಜಾಗತಿಕ ವ್ಯಾಪಾರದಲ್ಲಿ ಭಾರತಕ್ಕೆ ಹೋಲಿಸಿದರೆ ಚೀನಾ, ಬ್ರೆಜಿಲ್, ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ರಾಷ್ಟ್ರಗಳು ಇನ್ನೂ ಹೆಚ್ಚಿನ ಸುಂಕದ ಭಾರವನ್ನು ಹೊರುತ್ತಿವೆ. ಚೀನಾದ ಮೇಲೆ 37 ಶೇಕಡಾ, ಬ್ರೆಜಿಲ್ ಮೇಲೆ 50 ಶೇಕಡಾ ತೆರಿಗೆ ಮುಂದುವರಿದಿದೆ. ಇತ್ತ ಯುರೋಪಿಯನ್ ಯೂನಿಯನ್, ಜಪಾನ್, ದಕ್ಷಿಣ ಕೊರಿಯಾ ಮತ್ತು ಸ್ವಿಟ್ಜರ್ಲೆಂಡ್‌ಗಳಿಗೆ 15 ಶೇಕಡಾ ಮಾತ್ರ ಸುಂಕ ವಿಧಿಸಲಾಗಿದೆ.

ಆಗ್ನೇಯ ಏಷ್ಯಾದ ದೇಶಗಳಾದ ಬಾಂಗ್ಲಾದೇಶ, ವಿಯೆಟ್ನಾಂ, ಮಲೇಷ್ಯಾ ಮತ್ತು ಪಾಕಿಸ್ತಾನಕ್ಕೆ 19ರಿಂದ 20 ಶೇಕಡಾ ವರೆಗೆ ತೆರಿಗೆ ಜಾರಿಯಲ್ಲಿದೆ. ಭಾರತದ ಮೇಲಿನ ಸುಂಕ ಇಳಿಕೆಯಿಂದ ರಫ್ತು ವಲಯಕ್ಕೆ ಉತ್ತೇಜನ ಸಿಗುವ ನಿರೀಕ್ಷೆ ವ್ಯಕ್ತವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !