ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ ತಿಂಗಳು ಟೊಕಿಯೋದಲ್ಲಿ ನಡೆಯಲಿರುವ ಕ್ವಾಡ್ ಶೃಂಗಸಭೆಯಲ್ಲಿ ಯುಎಸ್ ಅಧ್ಯಕ್ಷ ಜೋ ಬಿಡೆನ್ ರಷ್ಯಾ ವಿರುದ್ಧ ಏಕೀಕೃತ ಪ್ರತಿಕ್ರಿಯೆಯ ವಿಷಯವನ್ನು ಪ್ರಸ್ತಾಪಿಸಲಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಸಂಘರ್ಷಕ್ಕೆ ಉಕ್ರೇನ್‌ಗೆ ಸಹಾಯ ಮಾಡಲು ವಾಷಿಂಗ್ಟನ್ ತೆಗೆದುಕೊಳ್ಳುತ್ತಿರುವ ಕ್ರಮಗಳ ಕುರಿತು ನವೀಕರಣವನ್ನು ನೀಡಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.
ಮೇ 24 ರಂದು ಟೋಕಿಯೊದಲ್ಲಿ ಕ್ವಾಡ್ರಿಲ್ಯಾಟರಲ್ ಸೆಕ್ಯುರಿಟಿ ಡೈಲಾಗ್ (QUAD) ರಾಷ್ಟ್ರಗಳ ನಾಯಕರ ಶೃಂಗಸಭೆ ನಡೆಸಲು ಜಪಾನ್ ನಿರ್ಧರಿಸಿದೆ. ರಷ್ಯಾಕ್ಕೆ ಏಕೀಕೃತ ಪ್ರತಿಕ್ರಿಯೆಯ ವಿಷಯವನ್ನು ಬಿಡೆನ್ ಮಾತನಾಡುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ, ಈ ಸಭೆಯಲ್ಲಿ ನಾವು ಅದೇ ವಿಚಾರ ಮುನ್ನೆಲೆಗೆ ತರುತ್ತೇವೆ ಎಂಬ ಮಾತನ್ನು ಹೇಳಿದ್ದಾರೆ.
ಸಭೆ ಇನ್ನೂ ಬಹಳ ದೂರ ಇದೆ. ಅಷ್ಟರಲ್ಲಿ ಈ ಬಗ್ಗೆ ನಾವು ಏನು ಮಾಡಲು ಹೊರಟಿದ್ದೇವೆ ಹಾಗೂ ಸ್ಥಿತಿಗತಿಗಳ ಬಗ್ಗೆ ಅಧ್ಯಕ್ಷರು ಖಂಡಿತಾ ಮಾಹಿತಿ ನೀಡುತ್ತಾರೆ ಎಂದು ಪ್ಸಾಕಿ ಹೇಳಿದ್ದಾರೆ. ಯುಎಸ್ ಮತ್ತು ಉಭಯ ರಾಷ್ಟ್ರಗಳ ನಡುವಿನ ಸಹಕಾರವನ್ನು ಹೆಚ್ಚಿಸಲು ಬಿಡೆನ್ ಮೇ 20-24 ರಂದು ದಕ್ಷಿಣ ಕೊರಿಯಾ ಮತ್ತು ಜಪಾನ್‌ಗೆ ಭೇಟಿ ನೀಡಲಿದ್ದಾರೆ ಎಂದು ಶ್ವೇತಭವನ ಬುಧವಾರ ಪ್ರಕಟಿಸಿದೆ. ಟೋಕಿಯೊದಲ್ಲಿ ಬಿಡೆನ್ ಆಸ್ಟ್ರೇಲಿಯಾ, ಜಪಾನ್, ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ಕ್ವಾಡ್ ಗುಂಪಿನ ನಾಯಕರನ್ನು ಭೇಟಿಯಾಗಲಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಬಿಡೆನ್ ಆಸ್ಟ್ರೇಲಿಯದ ಪ್ರಧಾನಿ ಸ್ಕಾಟ್ ಮಾರಿಸನ್, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನಿನ ಪ್ರಧಾನಿ ಯೋಶಿಹೈಡ್ ಸುಗಾ ಅವರನ್ನು ಶ್ವೇತಭವನದಲ್ಲಿ ಮೊದಲ ಬಾರಿಗೆ ಕ್ವಾಡ್‌ನ ವ್ಯಕ್ತಿಗತ ನಾಯಕರ ಶೃಂಗಸಭೆಗೆ ಆಹ್ವಾನಿಸಿದ್ದರು.