CINE | ಫೇಕ್‌ ಅಕೌಂಟ್‌ ಮಾಡಿಕೊಂಡು ಕೆಟ್ಟ ಪದ ಬಳಸಿದ್ರೆ ಚನ್ನಾಗಿರಲ್ಲ: ಅಲ್ಲು ಅರ್ಜುನ್‌ ಖಡಕ್‌ ವಾರ್ನಿಂಗ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಟಾಲಿವುಡ್​ ನಟ ಅಲ್ಲು ಅರ್ಜುನ್ ಅವರ ಸದ್ಯಕ್ಕೆ ಮಧ್ಯಂತರ ಜಾಮೀನು ಪಡೆದುಕೊಂಡಿದ್ದಾರೆ. ‘ಪುಷ್ಪ 2’ ಸಿನಿಮಾ ಪ್ರದರ್ಶನ ಆಗುವಾಗ ಸಂಧ್ಯಾ ಚಿತ್ರಮಂದಿರದಲ್ಲಿ ಕಾಲ್ತುಳಿತದಿಂದ ಅಭಿಮಾನಿ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ ಕಾನೂನಿನ ಸಂಕಷ್ಟ ಎದುರಾಗಿದೆ.

ಅಲ್ಲು ಅರ್ಜುನ್ ಅವರನ್ನು ಬಂಧಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಮಿತಿ ಮೀರಿದ ವರ್ತನೆ ತೋರಿಸುತ್ತಿದ್ದಾರೆ. ಅಂಥವರಿಗೆ ಅಲ್ಲು ಅರ್ಜುನ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

Image

ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದಕ್ಕೆ ಅನೇಕರಿಗೆ ಕೋಪ ಬಂತು. ಹಾಗಾಗಿ ತೆಲಂಗಾಣ ಸರ್ಕಾರದ ವಿರುದ್ಧ ಹಲವರು ಕಿಡಿಕಾರಿದರು. ಅದರ ಜೊತೆಗೆ ಕೆಲವರು ಅಶ್ಲೀಲ ಪದ ಬಳಕೆ ಕೂಡ ಮಾಡಿದ್ದಾರೆ. ಇದನ್ನು ಅಲ್ಲು ಅರ್ಜುನ್ ಅವರು ಖಂಡಿಸುತ್ತಿದ್ದಾರೆ. ಯಾರೂ ಕೂಡ ಅಸಭ್ಯವಾಗಿ ಪೋಸ್ಟ್ ಮಾಡಬಾರದು ಎಂದು ಅಲ್ಲು ಅರ್ಜುನ್ ಮನವಿ ಮಾಡಿಕೊಂಡಿದ್ದಾರೆ.

ನಿಮ್ಮ ಭಾವನೆಗಳನ್ನು ಜವಾಬ್ದಾರಿಯುತವಾಗಿ ವ್ಯಕ್ತಪಡಿಸಿ ಎಂದು ನಾನು ಅಭಿಮಾನಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಆನ್​ಲೈನ್​ ಮತ್ತು ಆಫ್​ಲೈನ್​ನಲ್ಲಿ ಯಾವುದೇ ರೀತಿಯ ಅಸಭ್ಯ ಭಾಷೆ ಬಳಸಬೇಡಿ ಎಂದು ಅಭಿಮಾನಿಗಳಿಗೆ ಅಲ್ಲ ಅರ್ಜುನ್ ಅವರು ಕಿವಿಮಾತು ಹೇಳಿದ್ದಾರೆ. ಅದೇ ರೀತಿ, ನಕಲಿ ಖಾತೆಯಲ್ಲಿ ಇಂಥ ಕೆಲಸ ಮಾಡುವವರಿಗೆ ವಾರ್ನಿಂಗ್ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!