ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾ ಕ್ರಿಕೆಟ್‌ಗೆ ದೀರ್ಘಕಾಲ ಸೇವೆ ಸಲ್ಲಿಸಿದ್ದ ಅನುಭವಿ ಬ್ಯಾಟರ್ ಉಸ್ಮಾನ್ ಖ್ವಾಜಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಧಿಕೃತವಾಗಿ ವಿದಾಯ ಹೇಳಿದ್ದಾರೆ. ಇಂಗ್ಲೆಂಡ್ ವಿರುದ್ಧ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಐದನೇ ಟೆಸ್ಟ್ ಪಂದ್ಯವೇ ಅವರ ಅಂತಿಮ ಪಂದ್ಯವಾಗಿದ್ದು, 15 ವರ್ಷಗಳ ಉಜ್ವಲ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ಎಳೆದಿದೆ.
2011ರ ಜನವರಿಯಲ್ಲಿ ಇದೇ ಸಿಡ್ನಿ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಖ್ವಾಜಾ, ಅದೇ ಎದುರಾಳಿ ಮತ್ತು ಅದೇ ಮೈದಾನದಲ್ಲಿ ವಿದಾಯ ಹೇಳಿರುವುದು ವಿಶೇಷ ಸಂಗತಿಯಾಗಿ ಮೂಡಿಬಂದಿದೆ. ಟೆಸ್ಟ್ ಸ್ಪೆಷಲಿಸ್ಟ್ ಎಂದು ಗುರುತಿಸಿಕೊಂಡಿದ್ದ ಅವರು ಆಸ್ಟ್ರೇಲಿಯಾ ಪರ 88 ಟೆಸ್ಟ್ ಪಂದ್ಯಗಳಲ್ಲಿ 159 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿ 6229 ರನ್ ಕಲೆಹಾಕಿದ್ದಾರೆ. ಈ ಅವಧಿಯಲ್ಲಿ ಒಂದು ದ್ವಿಶತಕ, 16 ಶತಕ ಮತ್ತು 28 ಅರ್ಧಶತಕಗಳನ್ನು ದಾಖಲಿಸಿದ್ದಾರೆ.
ಇದನ್ನೂ ಓದಿ: FOOD | ವಿಭಿನ್ನ ರೀತಿಯ ಕ್ರಿಸ್ಪಿ ಕಾರ್ನ್ ಪಕೋಡಾ! ಸಂಜೆ ಟೀ ಜೊತೆ ಸವಿಯಿರಿ
ಟೆಸ್ಟ್ ಕ್ರಿಕೆಟ್‌ಗೆ ಹೊರತಾಗಿ ಖ್ವಾಜಾ 40 ಏಕದಿನ ಪಂದ್ಯಗಳಲ್ಲಿ 1554 ರನ್ ಗಳಿಸಿದ್ದು, ಇದರಲ್ಲಿ ಎರಡು ಶತಕ ಹಾಗೂ 12 ಅರ್ಧಶತಕಗಳಿವೆ. ಟಿ20 ಮಾದರಿಯಲ್ಲಿ 9 ಪಂದ್ಯಗಳಲ್ಲಿ 182 ರನ್ ಗಳಿಸಿದ್ದಾರೆ. 2016ರಲ್ಲಿ ಐಪಿಎಲ್‌ನಲ್ಲಿ ರೈಸಿಂಗ್ ಪುಣೆ ಜೈಂಟ್ಸ್ ಪರ ಆಡಿದ ಅನುಭವವೂ ಅವರಿಗೆ ಇದೆ.

