ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ರಾಜ್ಯ ಸಭೆಗೆ ನಡೆಯಲಿರುವ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಘೋಷಿಸಿದೆ.
ರಾಜ್ಯ ಸಭಾ ಸಂಸದ ಹರಿದ್ವಾರ್ ದುಬೆ ನಿಧನದ ಬಳಿಕ ತೆರವಾಗಿರುವ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಈ ಸ್ಥಾನಕ್ಕೆ ಬಿಜೆಪಿ, ಯೋಗಿ ಮೊದಲ ಅವಧಿಯ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಡಾ. ದಿನೇಶ್ ಶರ್ಮಾ ಅಭ್ಯರ್ಥಿಯನ್ನಾಗಿ ಘೋಷಿಸಿದೆ.
ಸೆಪ್ಟೆಂಬರ್ 15 ರಂದು ಉತ್ತರ ಪ್ರದೇಶದ ರಾಜ್ಯಸಭಾ ಉಪ ಚುನಾವಣೆ ನಡೆಯಲಿದೆ. ಬಿಜೆಪಿ ಅಭ್ಯರ್ಥಿ ದಿನೇಶ್ ಶರ್ಮಾ ಗೆಲುವು ಬಹುತೇಕ ಪಕ್ಕಾ ಆಗಿದೆ. ಕಾರಣ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿಗೆ ಸಂಖ್ಯಾಬಲ ಹೆಚ್ಚಿರುವ ಕಾರಣ ಗೆಲುವು ಸುಲಭವಾಗಲಿದೆ. ಹರಿದ್ವಾರ್ ದುಬೆ ಅಕಾಲಿಕ ಮರಣದಿಂದ ರಾಜ್ಯಸಭೆ ಸಂಸದ ಸ್ಥಾನ ತೆರವಾಗಿತ್ತು.