ಮಂಗನ ಕಾಯಿಲೆಗೆ ಉತ್ತರ ಕನ್ನಡ ತತ್ತರ, 14 ದಿನದಲ್ಲಿ 37 ಮಂದಿಗೆ ಸೋಂಕು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಗನ ಕಾಯಿಲೆಗೆ ಉತ್ತರ ಕನ್ನಡ ತತ್ತರಿಸಿದ್ದು, ಕೇವಲ 14 ದಿನಗಳಲ್ಲಿ 37 ಜನರಿಗೆ ಸೋಂಕು ತಗುಲಿದೆ.

ಸಿದ್ದಪುರ ತಾಲೂಕಿನಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಈ ಬಗ್ಗೆ ಆರೋಗ್ಯ ಸಿಬ್ಬಂದಿ ಮನೆಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ. ಸೂಕ್ತ ಲಸಿಕೆ ಇಲ್ಲದ ಕಾರಣ ಆರೋಗ್ಯ ಸಿಬ್ಬಂದಿಯೂ ಭೀತಿಯಲ್ಲಿದ್ದಾರೆ.

ರೋಗದಿಂದ ಭಯಬೀತರಾಗಿರುವ ಜನ ದಿನವೂ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್ ಬೇಡಿಕೆ ಇಡುತ್ತಿದ್ದಾರೆ. ಈ ಮಧ್ಯೆ ಮೂರು ಮಂಗಗಳು ಮೃತಪಟ್ಟಿದ್ದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಮಂಗಗಳ ಸಾವಿಗೆ ಕಾರಣ ತಿಳಿದುಬಂದಿಲ್ಲ.

ಲಕ್ಷಣಗಳೇನು?
ಇದ್ದಕ್ಕಿದ್ದಂತೆಯೇ ಜ್ವರ, ಸ್ನಾಯುನೋವು, ಸುಸ್ತು, ತಲೆನೋವು ಮೊದಲ ಲಕ್ಷಣಗಳಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!