ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದಲ್ಲಿ ಹವಾಮಾನ ವೈಪರಿತ್ಯ ಹಿನ್ನೆಲೆ ಚಾರಣಕ್ಕೆ ಹೋಗಿದ್ದ 9 ಚಾರಣಿಗರು ಮೃತಪಟ್ಟಿದ್ದು, ಶೀಘ್ರದಲ್ಲಿಯೇ ಮೃತದೇಹಗಳು ಬೆಂಗಳೂರಿಗೆ ರವಾನೆಯಾಗಲಿವೆ.
ಚಾರಣಕ್ಕೆ ಹೋಗಿದ್ದ 20 ಕನ್ನಡಿಗರ ಪೈಕಿ 9 ಮಂದಿ ಕೊನೆಯುಸಿರೆಳೆದಿದ್ದಾರೆ. 9 ಮಂದಿ ಕನ್ನಡಿಗರ ಮೃತದೇಹವನ್ನು ರಾಜ್ಯಕ್ಕೆ ತರಲು ರಾಜ್ಯ ಸರ್ಕಾರದ ಶತಪ್ರಯತ್ನ ನಡೆಸಿದ್ದು, ವಿಮಾನದ ಮೂಲಕ ಮೃತದೇಹಗಳು ಬೆಂಗಳೂರು ತಲುಪಲಿವೆ.
ಕನ್ನಡಿಗರ ರಕ್ಷಣೆ, ಮೃತದೇಹ ತರಲು ಸಚಿವ ಕೃಷ್ಣಬೈರೇಗೌಡ ಅವರು ಉತ್ತರಾಖಂಡಕ್ಕೆ ಭೇಟಿ ನೀಡಿದ್ದು, ಉತ್ತರಾಖಂಡದ ಮುಖ್ಯ ಕಾರ್ಯದರ್ಶಿ ಶ್ರೀಮತಿ ರಾಧಾ ರಾತುರಿ ಮತ್ತು ವಿಪತ್ತು ನಿರ್ವಹಣೆಯ ಕಾರ್ಯದರ್ಶಿ ಶ್ರೀ ರಂಜಿತ್ ಸಿನ್ಹಾ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ.