ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಜ್ಬೇಕಿಸ್ತಾನ್ ಮಹಿಳೆಯ ಕೊಲೆ ಪ್ರಕರಣವನ್ನು ಶೇಷಾದ್ರಿಪುರಂ ಪೊಲೀಸರು ಬೇಧಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಸ್ಸಾಂ ಮೂಲದ ಅಮೃತ್ ಹಾಗೂ ರಾಬರ್ಟ್ ಬಂಧಿತರು. ಪ್ರವಾಸಿ ವೀಸಾದ ಮೇಲೆ ನಾಲ್ಕು ದಿನಗಳ ಕಾಲ ಬೆಂಗಳೂರಿಗೆ ಬಂದಿದ್ದ ಉಜ್ಬೇಕಿಸ್ತಾನ್ ಪ್ರಜೆ ಜೆಪರೋವಾ ಅವರ ಮೃತದೇಹ ಹೊಟೇಲ್‌ನಲ್ಲಿ ಸಿಕ್ಕಿತ್ತು. ಆರೋಪಿಗಳು ಇದೇ ಹೊಟೇಲ್‌ನ ಹೌಸ್ ಕೀಪಿಂಗ್ ಸಿಬ್ಬಂದಿಗಳಾಗಿದ್ದಾರೆ.
ಜರೀನಾ ಕೋಣೆ ಸ್ವಚ್ಛ ಮಾಡೋದಕ್ಕೆ ಇಬ್ಬರು ಕೊಠಡಿಗೆ ಬಂದಿದ್ದರು. ಈ ವೇಳೆ ಮಹಿಳೆ ಪರ್ಸ್‌ನಲ್ಲಿ ಹಣ ಇರುವುದು ಕಣ್ಣಿಗೆ ಬಿದ್ದಿದೆ. ದುರಾಸೆಯಿಂದ ಆಕೆಯನ್ನು ಉಸಿರುಗಟ್ಟಿಸಿ ಕೊಂದು ಹಣ ತೆಗೆದುಕೊಂಡು ಪರಾರಿಯಾಗಿದ್ದರು.