ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 197 ಡೆಂಗ್ಯೂ ಕೇಸ್‌ಗಳು ಪತ್ತೆಯಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 303ಕ್ಕೇರಿದೆ .
ಕಳೆದ 24 ಗಂಟೆಯಲ್ಲಿ 892 ಮಂದಿಗೆ ಟೆಸ್ಟ್ ನಡೆಸಿದ್ದು, ಈ ಪೈಕಿ 197 ಮಂದಿಗೆ ಡೆಂಗ್ಯೂ ದೃಢಪಟ್ಟಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 95, ಬೆಂಗಳೂರು ನಗರ 4, ಶಿವಮೊಗ್ಗ 16, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ 3, ಕಲಬುರಗಿ 15, ಕೊಪ್ಪಳ 1, ಚಾಮರಾಜನಗರ 6, ಮಂಡ್ಯ 33, ಉಡುಪಿ 1, ಚಿಕ್ಕಮಗಳೂರು ಜಿಲ್ಲೆಯಲ್ಲಿ 17 ಮಂದಿಗೆ ಸೋಂಕು ತಗುಲಿದೆ. 197 ಮಂದಿಯಲ್ಲಿ 0-1 ವರ್ಷದೊಳಗಿನವರಲ್ಲಿ 1 ಮಗುವಿಗೆ, 1 ರಿಂದ 18 ವರ್ಷಗೊಳಗಿನ 63 ಮಂದಿಗೆ ಸೋಂಕು ತಗುಲಿದೆ.
ಇನ್ನು ರಾಜ್ಯದಲ್ಲಿ ಜನವರಿಯಿಂದ ಈವರೆಗೆ ಒಟ್ಟು 7362 ಮಂದಿ ಡೆಂಗ್ಯೂ ಪೀಡಿತರಾಗಿದ್ದು, 7 ಮಂದಿ ಮೃತಪಟ್ಟಿದ್ದಾರೆ. ಸಾವಿನ ಪ್ರಮಾಣ 0.09 ಇದೆ.