June 1, 2026
Monday, June 1, 2026
spot_img

ಬರೀ 15 ವರ್ಷಕ್ಕೆ ರಾಶಿ ಪ್ರಶಸ್ತಿ ಬಾಚಿಕೊಂಡ ವೈಭವ್‌ ಸೂರ್ಯವಂಶಿ, ಇನ್ನೇನೆಲ್ಲಾ ಸಿಕ್ತು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಸಾಕಷ್ಟು ಹಿಸ್ಟರಿ ಕ್ರಿಯೇಟ್‌ ಆಗಿದೆ. ಅದರಲ್ಲಿಯೂ ಬರೀ 15 ವರ್ಷದ ಬ್ಯಾಟರ್‌ ವೈಭವ್‌ ಸೂರ್ಯವಂಶಿ ದಾಖಲೆಯ ಮೇಲೆ ದಾಖಲೆ ಬರೆದು ಬೀಗಿದ್ದಾರೆ.

ಇಡೀ ಟೂರ್ನಿಯಲ್ಲಿ ಗರಿಷ್ಠ ರನ್‌ ಕಲೆಹಾಕುವ ಮೂಲಕ ಆರೆಂಜ್‌ ಕ್ಯಾಪ್‌ ಪಡೆದ ಕಿರಿಯ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಬಾರಿ ಐಪಿಎಲ್‌ ಟೂರ್ನಿಯಲ್ಲಿ ವೈಭವ್‌ ಒಟ್ಟಾರೆ 776 ರನ್‌ ಕಲೆಹಾಕಿದ್ದಾರೆ. ಸಾಯಿ ಸುದರ್ಶನ್‌ ದಾಖಲೆಯನ್ನು ಮೀರಿ ವೈಭವ್‌ ಸಾಧನೆ ಮಾಡಿದ್ದಾರೆ.

ವೈಭವ್‌ಗೆ ಐದು ಪ್ರಶಸ್ತಿ

ಟೂರ್ನಿಯಲ್ಲಿ ಅಧಿಕ ರನ್‌ ಗಳಿಸಿದ್ದಕ್ಕಾಗಿ ಆರೆಂಜ್‌ ಕ್ಯಾಪ್‌ ಪಡೆದಿದ್ದಾರೆ. ಇದಕ್ಕೆ ಪ್ರೈಸ್‌ ಹಣ ಎಂದು ಹತ್ತು ಲಕ್ಷ ರೂಪಾಯಿ ಪಡೆದಿದ್ದಾರೆ.

ಇಡೀ ಟೂರ್ನಿಯಲ್ಲಿ 237.3 ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಪಡೆದಿದ್ದಾರೆ. ಈ ಸಾಧನೆಗಾಗಿ ಇವರಿಗೆ ಟಾಟಾ ಸಿಯೆರಾ ಕಾರು ಸಿಕ್ಕಿದೆ.

ಈ ಸರಣಿಯಲ್ಲಿ ಬರೋಬ್ಬರಿ 75 ಸಿಕ್ಸರ್‌ಗಳನ್ನು ವೈಭವ್‌ ಸಿಡಿಸಿದ್ದಾರೆ. ಈ ಸಾಧನೆಗಾಗಿ ಇವರಿಗೆ ಹತ್ತು ಲಕ್ಷ ರೂಪಾಯಿ ನೀಡಲಾಗಿದೆ.

ಈ ಬಾರಿಯ ಟೂರ್ನಿಯಲ್ಲಿ ಉದಯೋನ್ಮುಖ ಆಟಗಾರ ಪ್ರಶಸ್ತಿ ಕೂಡ ವೈಭವ್‌ಗೆ ಸಿಕ್ಕಿದೆ. ಇದಕ್ಕಾಗಿ ಇವರಿಗೆ ಹತ್ತು ಲಕ್ಷ ರೂಪಾಯಿ ನೀಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !