ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಡಿನಾದ್ಯಂತ ಸಂಭ್ರಮದ ವೈಕುಂಠ ಏಕಾದಶಿ ಆಚರಣೆ ನಡೆಯುತ್ತಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿರುಪತಿ ತಿಮ್ಮಪ್ಪನ ದರುಶನ ದರುಶನ ಪಡೆದಿದ್ದಾರೆ.
ತಿರುಪತಿ ದೇಗುಲದ ಅರ್ಚಕರು ಹಾಗೂ ಅಧಿಕಾರಿಗಳು ರಾಜ್ಯಪಾಲರು ಹಾಗೂ ಅವರ ಕುಟುಂಬವರನ್ನು ಸ್ವಾಗತಿಸಿದ್ದಾರೆ. ರಂಗನಾಯಕುಲ ಮಂಟಪದಲ್ಲಿ ಶ್ರೀವಾ ವಸ್ತ್ರ ನೀಡಿ ಗೌರವಿಸಿದ್ದಾರೆ.
ವೈಕುಂಠ ಏಕಾದಶಿಗಾಗಿ ತಿಮ್ಮಪ್ಪನ ಸನ್ನಿಧಿ ಪುಷ್ಪ ಹಾಗೂ ಲೈಟಿಂಗ್ನಿಂದ ಝಗಮಗಿಸುತ್ತಿದೆ. ಮಧ್ಯರಾತ್ರಿಯಿಂದಲೇ ದೇಗುಲ ತೆರೆದಿದ್ದು, ಭಕ್ತರಿಗೆ ದರುಶನಕ್ಕೆ ಅವಕಾಶ ನೀಡಲಾಗಿದೆ.