October 7, 2026
Wednesday, October 7, 2026
spot_img

ಅರ್ಹತೆಗೆ ಬೆಲೆ ಕೊಡಿ, ಮೋಸಕ್ಕಲ್ಲ: ತಂದೆಯ ಮೌಲ್ಯಗಳನ್ನು ನೆನಪಿಸಿಕೊಂಡ ಸಚಿನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಕ್ಕಳಿಗೆ ಪ್ರಾಮಾಣಿಕತೆಯೇ ನಿಜವಾದ ಆಸ್ತಿ ಎಂದು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಪ್ರತಿಪಾದಿಸಿದ್ದಾರೆ. ಪ್ರೊಫೆಸರ್ ಆಗಿದ್ದ ತಮ್ಮ ತಂದೆ ಕಲಿಸಿದ ಜೀವನ ಪಾಠವನ್ನು ಸ್ಮರಿಸಿರುವ ಅವರು, “ಸೋಲನ್ನು ಸ್ವೀಕರಿಸುವುದು ತಪ್ಪಲ್ಲ, ಆದರೆ ಗೆಲುವಿಗಾಗಿ ಅಪ್ರಾಮಾಣಿಕ ಹಾದಿ ಹಿಡಿಯುವುದು ಅಕ್ಷಮ್ಯ ಅಪರಾಧ” ಎಂದು ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಶಾರ್ಟ್‌ಕಟ್ ಸಂಸ್ಕೃತಿ ಮತ್ತು ಸಮಾಜದ ಹೊಣೆಗಾರಿಕೆ

ಸಾಧನೆಗಿಂತ ಕೇವಲ ಅಂತಿಮ ರಿಸಲ್ಟ್‌ಗೆ ಮಾತ್ರ ಪ್ರಾಮುಖ್ಯತೆ ನೀಡುವ ಇಂದಿನ ಸಾಮಾಜಿಕ ಮನಸ್ಥಿತಿ ಯುವಜನರನ್ನು ತಪ್ಪು ದಾರಿಗೆ ತಳ್ಳುತ್ತಿದೆ. ಯೋಗ್ಯತೆಗಿಂತ ಶಾರ್ಟ್‌ಕಟ್‌ಗಳನ್ನು ಹುಡುಕುವ ಈ ಪ್ರವೃತ್ತಿಯನ್ನು ಬದಲಾಯಿಸುವುದು ಹಿರಿಯರಾದ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಯುವ ಶಕ್ತಿ ಮತ್ತು ಭವಿಷ್ಯದ ಸವಾಲುಗಳು

ಕಠಿಣ ಪರಿಶ್ರಮಕ್ಕೂ ತಕ್ಕ ಪ್ರತಿಫಲ ಸಿಗದೇ ಇದ್ದಾಗ ವಿದ್ಯಾರ್ಥಿಗಳಲ್ಲಿ ನಿರಾಶೆ ಮೂಡುವುದು ಸಹಜ. ಕಷ್ಟಪಟ್ಟು ಓದಿದ ಯುವಜನತೆಗೆ ಅನ್ಯಾಯವಾಗದಂತೆ ತಡೆಯಲು ಸಮಾಜ ಬದ್ಧವಾಗಿರಬೇಕು. ಪೋಷಕರು, ಶಿಕ್ಷಕರು ಹಾಗೂ ಆಡಳಿತ ವ್ಯವಸ್ಥೆಯು ಒಟ್ಟಾಗಿ ದೇಶದ ನವಶಕ್ತಿಯ ಕನಸುಗಳಿಗೆ ಸರಿಯಾದ ಪ್ರೋತ್ಸಾಹ ಮತ್ತು ನೆರವು ನೀಡಬೇಕಿದೆ.

Must Read