ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ವರ್ ಯಾತ್ರಾರ್ಥಿಗಳಿದ್ದ ವ್ಯಾನ್ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಐವರು ಮೃತಪಟ್ಟಿರುವ ಘಟನೆ ಬಿಹಾರದ ಭಗಲ್ಪುರ ಜಿಲ್ಲೆಯ ಶಹಕುಂಡ್‌ನಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ಪುರಾನಿ ನಿವಾಸಿಗಳಾದ ಸಂತೋಷ್ ಕುಮಾರ್ (18), ಮನೋಜ್ ಕುಮಾರ್ (24), ವಿಕ್ರಮ್ ಕುಮಾರ್ (23), ಅಂಕುಶ್ ಕುಮಾರ್ (18) ಹಾಗೂ ರವೀಶ್ ಕುಮಾರ್ (18) ಮೃತರೆಂದು ಗುರುತಿಸಲಾಗಿದೆ.
ಯಾತ್ರಾರ್ಥಿಗಳು ಶಹಕುಂಡ್‌ನ ಪುರಾನಿ ಖರೈನಿಂದ ಸುಲ್ತಾನಗಂಜ್‌ಗೆ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿ, ನಂತರ ನಂತರ ಜೆಥೌರ್ ನಾಥ್ ದೇವಾಲಯದಲ್ಲಿ ಪೂಜೆ ಮಾಡಲು ಹೊರಟ್ಟಿದ್ದರು ಎನ್ನಲಾಗಿದೆ. ವಾಹನದಲ್ಲಿ ಒಟ್ಟು 9 ಮಂದಿ ಪ್ರಯಾಣಿಸುತ್ತಿದ್ದರು. ಈ ಪೈಕಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಸ್ಥಿತಿ ಗಂಭೀರವಾಗಿದ್ದು, ಇನ್ನುಳಿದವರು ಸಣ್ಣ-ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯಾಸ್ಪತ್ರೆಗೆ ದಾಖಲಿಸಲಾಗಿದೆ.