ಕರಾವಳಿಯ ಹಳಿಯಲ್ಲಿ ವಂದೇ ಭಾರತ್ ಹವಾ: ಕೊಚ್ಚುವೇಲಿ – ಮಂಗಳೂರು ನಡುವೆ ವಿಶೇಷ ಸೇವೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕರಾವಳಿಯ ಪಾಲಿಗೆ ಹೊಸ ಗಿಫ್ಟ್ ನೀಡಲು ಮುಂದಾಗಿರುವ ರೈಲ್ವೆ ಇಲಾಖೆ ಇದರ ಭಾಗವಾಗಿ ಇಂದು ಕೊಚ್ಚುವೇಲಿಯಿಂದ ಮಂಗಳೂರಿಗೆ ವಂದೇ ಭಾರತ್ ವಿಶೇಷ ಸಂಚಾರ ನಡೆಸಲಿದೆ.

ಕೊಚ್ಚುವೇಲಿಯಿಂದ ಬೆಳಗ್ಗೆ 10:45ಕ್ಕೆ ಹೊರಡುವ ರೈಲು ಇಂದು ರಾತ್ರಿ 10 ಗಂಟೆಗೆ ಮಂಗಳೂರು ಸೆಂಟ್ರಲ್ ತಲುಪಲಿದೆ. ಒಟ್ಟು 11 ಗಂಟೆ 15 ನಿಮಿಷಗಳ ಪ್ರಯಾಣದ ಅವಧಿಯ ಈ ರೈಲು ಕೊಲ್ಲಂ, ಕೊಟ್ಟಾಯಂ, ಎರ್ನಾಕುಳಂ ಟೌನ್, ತ್ರಿಶೂರ್, ಶೋರ್ನೂರ್, ತಿರೂರ್, ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡುಗಳಲ್ಲಿ ನಿಲುಗಡೆ ಹೊಂದಿದೆ.

ಒಟ್ಟು ಎಂಟು ಕೋಚ್‌ಗಳನ್ನು ಈ ರೈಲು ಹೊಂದಿದ್ದು, ಪ್ರಯಾಣಿಕರ ದಟ್ಟಣೆಯನ್ನು ಕಡಿಮೆಮಾಡಲು ಈ ಸೇವೆಯನ್ನು ನೀಡಲಾಗುತ್ತಿದೆ ಎಂದು ರೈಲ್ವೆ ತಿಳಿಸಿದೆ. ಕೊಚುವೇಲಿಯಿಂದ ಮಂಗಳೂರಿಗೆ ಎಸಿ ಚೇರ್ ಕಾರ್‌ನಲ್ಲಿ 1470ರೂ. ಅದೇ ಮಾರ್ಗದಲ್ಲಿ ಎಕ್ಸಿಕ್ಯೂಟಿವ್ ಚೇರ್ ಕಾರ್ ನಲ್ಲಿ 2970 ರೂ. ನಿಗದಿಪಡಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. ಕಾರ್ನಾಟಕದವರಿಗೆ ಅಥವಾ ಮಂಗಳೂರಿನವರಿಗೆ ಏನೂ ಪ್ರಯೋಜನವಿಲ್ಲ, ಲೆಕ್ಕಕ್ಕೆ ಮಾತ್ರ, ವೈದ್ಯಕೀಯ, ಕಲಿಯುವಿಕೆಗೆ ಕೆಲಸಕ್ಕೆ under develop ಕೇರಳದಿಂದ ವಲಸೆ ಬರುವವರಿಗೆ ಮಾತ್ರ.

LEAVE A REPLY

Please enter your comment!
Please enter your name here

error: Content is protected !!