ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಚೀಪುರಂ ಇಡ್ಲಿ ಅಥವಾ ಮಸಾಲಾ ಕಡುಬು ಅಂತಲೇ ಕರಿಯುವ ಈ ಖಾದ್ಯ ಆರೋಗ್ಯಕ್ಕೂ ಬಹಳ ಒಳ್ಳೆಯದು. ಜೀರ್ಣ ಕ್ರಿಯೆಗೆ ಇದರಲ್ಲಿರುವ ಪದಾರ್ಥಗಳು ಸಹಾಯ ಮಾಡುತ್ತವೆ. ಮಾಡಲು ಕೂಡ ಸುಲಭ ಒಮ್ಮೆ ಮಾಡಿ ನೋಡಿ
1 ಕಪ್ ಇಡ್ಲಿ ರವೆ ಅಥವಾ ಅಕ್ಕಿ ರವೆ
1/2 ಕಪ್ ಉದ್ದಿನ ಬೇಳೆ
1 ಟೀಸ್ಪೂನ್ ಮೆಂತ್ಯೆ
ರುಚಿಗೆ ಉಪ್ಪು
1/2 ಟೀಸ್ಪೂನ್ ಸಾಸಿವೆ
1/2 ಟೀಸ್ಪೂನ್ ಜೀರಿಗೆ
1 ಟೀಸ್ಪೂನ್ ಉದ್ದಿನ ಬೇಳೆ
1 ಟೀಸ್ಪೂನ್ ಕಡಲೆಬೇಳೆ
1/2 – 1 ಟೀಸ್ಪೂನ್ ಪುಡಿಮಾಡಿದ ಕರಿಮೆಣಸು
1/2 ಟೀಸ್ಪೂನ್ ಸಣ್ಣದಾಗಿ ಹೆಚ್ಚಿದ ಶುಂಠಿ
1 ಟೀಸ್ಪೂನ್ ಹೆಚ್ಚಿದ ಕರಿಬೇವಿನ ಎಲೆಗಳು
1 tbsp ಕೊತ್ತಂಬರಿ ಸೊಪ್ಪು
1 ಹಸಿ ಮೆಣಸಿನಕಾಯಿ
1/4 ಟೀಸ್ಪೂನ್ ಇಂಗು
1 ಟೀಸ್ಪೂನ್ ಅಡುಗೆ ಎಣ್ಣೆ
ಮಾಡುವ ವಿಧಾನ:
ಮೊದಲಿಗೆ ಒಂದು ಬಟ್ಟಲಿನಲ್ಲಿ ಉದ್ದಿನ ಬೇಳೆ ಹಾಗೂ ಮೆಂತ್ಯೆ ಹಾಕಿ ಚೆನ್ನಾಗಿ ತೊಳೆದು ನೆನಸಿಡಿ. ನೆನದ ಬಳಿಕ ನುಣ್ಣಗೆ ಮಿಕ್ಸಿ ಜಾರಿನಲ್ಲಿ ರುಬ್ಬಿಕೊಳ್ಳಿ. ಇನ್ನೊಂದು ಬೌಲ್ಗೆ ರವೆ ಹಾಕಿ, ರುಬಬಿದ ಮಿಶ್ರಣ ಸೇರಿಸಿ ಚೆನ್ನಾಗಿ ಕಲಸಿ 7/8ಗಂಟೆಗಳ ಕಾಲ ಹಾಗೆ ಬಿಡಿ. ನಂತರ ಒಂದು ಪ್ಯಾನ್ಗೆ ಎಣ್ಣೆ ಹಾಕಿ ಬಿಸಿಯಾದ ಕೂಡಲೇ ಮೇಲೆ ನೀಡಿದ ಎಲ್ಲಾ ಸಾಮಗ್ರಿಗಳನ್ನು ಒಂದೊಂದಾಗಿ ಸೇರಿಸಿ ಸ್ವಲ್ಪ ತಣಿದ ಮೇಲೆ ಹಿಟ್ಟಿಗೆ ಸುರಿದು ಮತೊಮ್ಮೆ ಕಲಸಿ. ಇದೀಗ ಇಡ್ಲಿ ಬೇಯಿಸುವ ಪಾತ್ರೆ ಅಥವಾ ಹಬೆಯಲ್ಲಿ ಬೇಯಿಸುವ ಪಾತ್ರೆಗೆ ನೀರು ಸುರಿದು ಕುದಿಸಿ ಅದರ ಮೇಲೊಂದು ತೂತಿರುವ ಪ್ಲೇಟ್ ಇಡಿ. ಉದ್ದವಿರುವ ಲೋಟ ತೆಗೆದುಕೊಂಡು ಅದಕ್ಕೆ ಬೆಣ್ಣೆ, ತುಪ್ಪ, ಎಣ್ಣೆ ಯಾವುದಾದರೊಂದನ್ನು ಹಚ್ಚಿ, ಹಿಟ್ಟನ್ನು ಮುಕ್ಕಾಲು ಭಾಗದವರೆಗೆ ಸುರಿದು ಪಾತ್ರೆಯಲ್ಲಿಡಿ. ಇಪ್ಪತ್ತು ನಿಮಿಷಗಳ ಬಳಿಕ ತೆರೆದರೆ ಸಾಫ್ಟ್ ಸಾಫ್ಟ್ ಕಾಂಚಿಪುರಂ ಇಡ್ಲಿ ಸವಿಯಲು ಸಿದ್ಧ.