ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್‌ಬಾಸ್ ಮನೆಯಲ್ಲಿ ವರ್ತೂರ್ ಸಂತೋಷ್ ಇದೇ ಮೊದಲ ಬಾರಿಗೆ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ವರ್ತೂರ್ ಮಾವ ನನ್ನ ಮಗಳನ್ನು ಮದುವೆಯಾಗಿ ಬಿಟ್ಟು ಹೋಗಿದ್ದಾನೆ ಅವನಿಗೆ ಯಾರೂ ಹೆಣ್ಣು ಕೊಡಬೇಡಿ ಎಂದು ಕಣ್ಣೀರಿಟ್ಟಿದ್ದರು.
ಆದರೆ ಬಿಗ್‌ಬಾಸ್‌ಗೆ ಬರುವ ಮುನ್ನ ವರ್ತೂರ್ ತಮಗೆ ಮದುವೆ ಆಗಿಲ್ಲ ಎಂದು ಹೇಳಿಕೊಂಡಿದ್ದರು. ಇದೀಗ ಮೊದಲ ಬಾರಿಗೆ ಮದುವೆ ಬಗ್ಗೆ ಮಾತನಾಡಿದ್ದು, ಮದುವೆ ಆದರೂ ಆದಂತಿಲ್ಲ ಎಂದು ಹೇಳಿದ್ದಾರೆ.
ನಾನು ಮದುವೆ ಆಗಿರುವ ವಿಷಯ ನಿಜ, ನನ್ನ ಮಾವನ ಮಗಳನ್ನೇ ಮನೆಯವರ ಒತ್ತಾಯಕ್ಕೆ ಮದುವೆ ಆದೆ. ಆದರೆ ಅವಳು ನನ್ನ ತಾಯಿಗೆ ಕಿಂಚಿತ್ತೂ ಗೌರವ ಕೊಡುತ್ತಿರಲಿಲ್ಲ. ಹೀಗಾಗಿ ಅವಳನ್ನು ಬಿಟ್ಟೆ ಎಂದು ಹೇಳಿಕೊಂಡಿದ್ದಾರೆ.