ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಧ್ಯಾಹ್ನವೇ ಮಳೆಯ ಆಗಮನವಾಗಿದೆ. ದಿಢೀರ್ ತುಂತುರು ಮಳೆಯಿಂದ ವಾಹನ ಸವಾರರು ಪರದಾಟ ನಡೆಸುವಂತಾಗಿದ್ದು, ನಗರದ ಕೆ.ಆರ್ ಮಾರ್ಕೆಟ್, ಚಾಮರಾಜಪೇಟೆ, ಜಯನಗರ, ಶಾಂತಿನಗರ ಹಾಗೂ ಕಾರ್ಪೋರೇಶನ್ ಸುತ್ತಾಮುತ್ತ ಮಳೆ ಆರಂಭವಾಗಿದೆ.
ಇನ್ನು ಕೆಲವೇ ಕ್ಷಣದ ಮಳೆಗೆ ಕೆ.ಆರ್.ಸರ್ಕಲ್ ಬಳಿ ನೀರು ನಿಂತು ರಸ್ತೆ ಹೊಳೆಯಂತಾಗಿದೆ. ರಸ್ತೆಯಲ್ಲಿ ನಿಂತ ನೀರಲ್ಲೇ ವಾಹನಗಳ ಸಂಚಾರ ಮಾಡುತ್ತಿದ್ದು, ಸಂಚಾರ ವ್ಯತ್ಯಯವಾಗಿದೆ. ನಿನ್ನೆಯೂ ರಾಜಧಾನಿ ಬೆಂಗಳೂರಿನಲ್ಲಿ ಮಳೆ ಸುರಿದಿದ್ದು, ವಾಹನ ಸಂಚಾರಕ್ಕೆ ತಡೆಯಾಗಿತ್ತು.