ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಪಂಜಾಬ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವಿನ ರೋಚಕ ಪಂದ್ಯ ಮಳೆಯಿಂದ ಸ್ಥಗಿತೊಂಡಿತು.
ಕೆಕೆಆರ್ ತಂಡದ ರನ್ ಚೇಸಿಂಗ್‌ಗೆ ವೇಳೆ ವರುಣನ ಆಗಮನವಾಗಿದ್ದು, 192 ರನ್ ಟಾರ್ಗೆಟ್ ಪಡೆದ ಕೆಕೆಆರ್ 16 ಓವರ್ ಮುಕ್ತಾಯಕ್ಕೆ 7 ವಿಕೆಟ್ ಕಳೆದುಕೊಂಡು 146 ರನ್ ಸಿಡಿಸಿತ್ತು.
ಹೀಗಾಗಿ ಡಕ್ ವರ್ತ್ ನಿಯಮದನ್ವಯ ಕೆಕೆಆರ್ 7 ರನ್ ಹಿನ್ನಡೆ ಅನುಭವಿಸಿತ್ತು. ಕೆಲ ಹೊತ್ತು ಕಾದರೂ ಪಂದ್ಯ ಮತ್ತೆ ಆರಂಭಗೊಳ್ಳಲಿಲ್ಲ. ಹೀಗಾಗಿ ಪಂಜಾಬ್ ಕಿಂಗ್ಸ್ ರನ್ ಗೆಲುವು ದಾಖಲಿಸಿತು.
ಸ್ಪೋಟಕ ಬ್ಯಾಟಿಂಗ್ ಮೂಲಕ ಪಂಜಾಬ್ ಕಿಂಗ್ಸ್ 191 ರನ್ ಸಿಡಿಸಿತು. ಬೃಹತ್ ಮೊತ್ತ ಗುರಿ ಪಡೆದ ಕೋಲ್ಕತಾ ನೈಟ್ ರೈಡರ್ಸ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಮನ್ದೀಪ್ ಸಿಂಗ್ ಕೇವಲ 2 ರನ್ ಸಿಡಿಸಿ ಔಟಾದರು. ಇತ್ತ ಅನುಕುಲ್ ರಾಯ್ 4 ರನ್ ಸಿಡಿಸಿ ನಿರ್ಗಮಿಸಿದರು. ರಹೆಮಾನುಲ್ಲಾ ಗುರ್ಬಾಜ್ ಹಾಗೂ ವೆಂಕಟೇಶ್ ಅಯ್ಯರ್ ಜೊತೆಯಾಟದಿಂದ ಕೋಲ್ಕತಾ ಚೇತರಿಸಿಕೊಂಡಿತು. ಆದರೆ ನಥನ್ ಎಲ್ಲಿಸ್ ದಾಳಿಗೆ ಇವರ ಜೊತೆಯಾಟ ಮುರಿದು ಬಿತ್ತು. ಗುರ್ಬಾಜ್ 16 ಎಸೆತದಲ್ಲಿ 22 ರನ್ ಸಿಡಿಸಿ ನಿರ್ಗಮಿಸಿದರು.
ವೆಂಕಟೇಶ್ ಅಯ್ಯರ್ ಹಾಗೂ ನಾಯಕ ನಿತೀಶ್ ರಾಣಾ ಕೆಕೆಆರ್ ತಂಡಕ್ಕೆ ಆಸರೆಯಾದರು. 17 ಎಸೆತದಲ್ಲಿ 24 ರನ್ ಸಿಡಿಸಿ ರಾಣಾ ವಿಕೆಟ್ ಕೈಚೆಲ್ಲಿದರು. ಇದರ ಬೆನ್ನಲ್ಲೇ ರಿಂಕು ಸಿಂಗ್ ಕೇವಲ 4 ರನ್ ಸಿಡಿಸಿ ಔಟಾದರು. 19 ಎಸೆತದಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ರಸೆಲ್ 35 ರನ್ ಸಿಡಿಸಿ ಔಟಾದರು. ಇತ್ತ ವೆಂಕಟೇಶ್ ಅಯ್ಯರ್ 28 ಎಸೆತದಲ್ಲಿ 34 ರನ್ ಸಿಡಿಸಿದರು.
ಶಾರ್ದೂಲ್ ಠಾಕೂರ್ ಹಾಗೂ ಸುನಿಲ್ ನರೈನ್ ಸಿಕ್ಸರ್ ಅಬ್ಬರ ಆರಂಭಿಸಿದ ಬೆನ್ನಲ್ಲೇ ಮಳೆ ಆಗಮನವಾಗಿ ಪಂದ್ಯ ಸ್ಥಗಿತಗೊಂಡಿತು. .