ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿಗೆ ಶುಕ್ರವಾರ ಸಂಜೆಯ ವೇಳೆಗೆ ವರುಣ ತಂಪೆರೆದಿದ್ದಾನೆ.
ಯುಗಾದಿ ಮುನ್ನಾ ದಿನ ಹಬ್ಬದ ಖರೀದಿಗಾಗಿ ತೆರಳಿದ್ದ ಜನತೆಗೆ ಮಳೆ ಒಂದಿಷ್ಟು ಸಂಕಷ್ಟ ಉಂಟುಮಾಡಿತ್ತಾದರೂ, ಬಿಸಿಲ ಬೇಗೆಗೆ ಬೆಂದು ಹೈರಾಣಾಗಿದ್ದ ಬೆಂಗಳೂರಿಗರಿಗೆ ಸಂಕಷ್ಟಕ್ಕಿಂತ ಸಂತಸವೇ ಹೆಚ್ಚಾಗಿದ್ದು ಕಂಡುಬಂತು.
ರಾಜಧಾನಿಯ ಬಹುತೇಕ ಭಾಗಗಳಲ್ಲಿ ಭರ್ಜರಿಯಾಗಿಯೇ ಮಳೆ ಸುರಿದಿದ್ದು, ನಗರದ ವಸಂತ ನಗರ, ಕಬ್ಬನ್ ಪಾರ್ಕ್, ಮೆಜೆಸ್ಟಿಕ್, ರೇಸ್ ಕೋರ್ಸ್, ಜಯನಗರ, ಬಸವನಗುಡಿ, ಜೆ.ಪಿ. ನಗರಗಳಲ್ಲಿ ಮಳೆ ಇಳೆಗೆ ತಂಪೆರೆದಿದೆ.