ಪಾಕ್ ಗೆ ವರುಣನ ಗಿಫ್ಟ್: ನ್ಯೂಜಿಲೆಂಡ್ ಸೋಲಿಸಿ ಸೆಮೀಸ್ ಆಸೆ ಜೀವಂತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವಕಪ್ ಟೂರ್ನಿಯಿಂದ ಇನ್ನೇನು ಬಹುತೇಕ ಹೊರಬಿದ್ದಿದ್ದ ಪಾಕಿಸ್ತಾನಕ್ಕೆ ವರುಣ ದಯೆ ತೋರಿದ್ದು, ಬೆಂಗಳೂರಿನಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಿದೆ.

ಮಳೆ ಕಾರಣ ಪಾಕಿಸ್ತಾನ ಡಕ್‌ವರ್ತ್ ನಿಯಮದನ್ವಯ 21 ರನ್ ಗೆಲುವು ದಾಖಲಿಸಿದೆ. ಈ ಮೂಲಕ ಪಾಕಿಸ್ತಾನ ಸೆಮಿಫೈನಲ್ ಆಸೆ ಜೀವಂತವಾಗಿದೆ. ಇತ್ತ ನ್ಯೂಜಿಲೆಂಡ್ ಸೋಲಿನಿಂದ ಸೌತ್ ಆಫ್ರಿಕಾದ ಸೆಮಿಫೈನಲ್ ಸ್ಥಾನ ಖಚಿತಗೊಂಡಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ 401 ರನ್ ಸಿಡಿಸಿತ್ತು. ಆದರೆ ಪಾಕಿಸ್ತಾನ ಮಳೆಯಿಂದ ಪಾಕಿಸ್ತಾನ ಕೇವಲ 25.3 ಓವರ್ ಮಾತ್ರ ಆಟವಾಡಲು ಸಾಧ್ಯವಾಯಿತು. ಫಕರ್ ಜಮಾನ್ ಹಾಗೂ ಬಾಬರ್ ಅಜಮ್ ಹೋರಾಟಕ್ಕೆ ನ್ಯೂಜಿಲೆಂಡ್ ಬೆಚ್ಚಿ ಬಿದ್ದಿತ್ತು. ಫಕರ್ ಸ್ಫೋಟಕ ಶತಕ ಸಿಡಿಸಿದರೆ, ಬಾಬರ್ ಹಾಫ್ ಸೆಂಚುರಿ ಸಿಡಿಸಿದರು.

21 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡ ಪಾಕಿಸ್ತಾನ 160 ರನ್ ಸಿಡಿಸಿತ್ತು. ಈ ವೇಳೆ ಮಳೆಯಿಂದ ಪಂದ್ಯ ಸ್ಥಗಿತಗೊಂಡಿತ್ತು. ಮತ್ತೆ ಮಳೆ ಹೀಗಾಗಿ ಡಕ್ ವರ್ತ್ ನಿಯಮದನ್ವಯ 41 ಓವರ್‌ಗೆ ಪಂದ್ಯ ಕಡಿತಗೊಳಿಸಿ ಪಾಕಿಸ್ತಾನಕ್ಕೆ 342 ರನ್ ಟಾರ್ಗೆಟ್ ನೀಡಲಾಗಿತ್ತು. ಮತ್ತೆ ಮಳೆ ಬಂದ ಕಾರಣ ಪಂದ್ಯ ಪುನರ್ ಆರಂಭಗೊಳ್ಳಲೇ ಇಲ್ಲ. ಆದರೆ ಪಾಕಿಸ್ತಾನ 25.3 ಓವರ್‌ಗಳಲ್ಲಿ 200 ರನ್ ಸಿಡಿಸಿತ್ತು. ಈ ಮೂಲಕ ಡಕ್ ವರ್ತ್ ನಿಯಮದನ್ವಯ 21 ರನ್ ಮುನ್ನಡೆಯಲ್ಲಿತು. ಹೀಗಾಗಿ ಗೆಲುವು ದಾಖಲಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!