ಹಸಿರು ಸಸ್ಯಗಳು ಮನೆಯಲ್ಲಿ ಕೇವಲ ಅಲಂಕಾರಕ್ಕೆ ಮಾತ್ರವಲ್ಲ, ಮಾನಸಿಕ ಶಾಂತಿ, ಶುದ್ಧ ಗಾಳಿ ಮತ್ತು ಸಕಾರಾತ್ಮಕ ಶಕ್ತಿಯನ್ನು ತರಲು ಸಹ ಸಹಾಯಕವಾಗಿವೆ. ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ಸಸ್ಯಗಳು ಮನೆಗೆ ಸಂತೋಷ, ಆರೋಗ್ಯ ಮತ್ತು ಸಮೃದ್ಧಿಯನ್ನು ತರುವುದಾಗಿ ನಂಬಲಾಗಿದೆ. ಇಂತಹ ಕೆಲವು ಪ್ರಮುಖ ಸಸ್ಯಗಳ ಬಗ್ಗೆ ತಿಳಿಯೋಣ.
- ಬಿದಿರಿನ ಗಿಡ : ವಾಸ್ತು ಪ್ರಕಾರ ಬಿದಿರು ಗಿಡವು ಶುಭಸಂಕೇತವಾಗಿದೆ. ಇದು ಮನೆಯೊಳಗೆ ಸಂತೋಷ, ಶಾಂತಿ, ಅದೃಷ್ಟ ಮತ್ತು ಆರ್ಥಿಕ ಸ್ಥಿರತೆಯನ್ನು ತರಲು ಸಹಕಾರಿ. ಜೊತೆಗೆ ಮನೆಯ ಒಳಾಂಗಣದ ಸೌಂದರ್ಯವನ್ನೂ ಹೆಚ್ಚಿಸುತ್ತದೆ. ವಿಶೇಷವಾಗಿ ಪೂರ್ವ ಅಥವಾ ಆಗ್ನೇಯ ದಿಕ್ಕಿನಲ್ಲಿ ಇಡುವುದು ಉತ್ತಮ.
- ಮನಿ ಪ್ಲಾಂಟ್ : ಮನಿ ಪ್ಲಾಂಟ್‌ನ್ನು ವಾಸ್ತುವಿನಲ್ಲಿ ಆರ್ಥಿಕ ಪ್ರಗತಿ ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮನಿ ಪ್ಲಾಂಟ್‌ನ್ನು ಮನೆಯ ಆಗ್ನೇಯ ಕೋಣೆಯಲ್ಲಿ ಅಥವಾ ಕಿಟಕಿಯ ಹತ್ತಿರ ಇಡುವುದರಿಂದ ಧನ ಭಾಗ್ಯ ಹೆಚ್ಚುತ್ತದೆ ಮತ್ತು ನಕಾರಾತ್ಮಕ ಶಕ್ತಿ ದೂರವಾಗುತ್ತದೆ.
- ಲ್ಯಾವೆಂಡರ್ ಸಸ್ಯ : ಲ್ಯಾವೆಂಡರ್ ತನ್ನ ಪರಿಮಳದಿಂದ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಒತ್ತಡ ಕಡಿಮೆಮಾಡಲು, ಒಳ್ಳೆಯ ನಿದ್ರೆ ತರಲು ಮತ್ತು ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹರಡುವುದಕ್ಕೆ ಇದು ಸಹಾಯಕ. ವಾಸ್ತು ಪ್ರಕಾರ ಈ ಸಸ್ಯವನ್ನು ಹಾಸಿಗೆ ಕೋಣೆಯಲ್ಲಿ ಅಥವಾ ವಿಶ್ರಾಂತಿ ಸ್ಥಳದಲ್ಲಿ ಇಡುವುದು ಉತ್ತಮ.
- ಪೀಸ್ ಲಿಲ್ಲಿ : ಪ್ರೀತಿ, ಸಾಮರಸ್ಯ ಮತ್ತು ಶಾಂತಿಯ ಸಂಕೇತವಾದ ಪೀಸ್ ಲಿಲ್ಲಿ ಸಸ್ಯವು ಮನೆಯ ವಾತಾವರಣವನ್ನು ಶುದ್ಧಗೊಳಿಸುತ್ತದೆ. ಇದನ್ನು ಮಲಗುವ ಕೋಣೆಯಲ್ಲಿ ಇಟ್ಟರೆ ನಿದ್ರೆ ಉತ್ತಮವಾಗುತ್ತದೆ ಮತ್ತು ನಕಾರಾತ್ಮಕ ಆಲೋಚನೆಗಳು ದೂರವಾಗುತ್ತವೆ.
- ಸ್ನೇಕ್ ಪ್ಲಾಂಟ್: ವಾಸ್ತು ಪ್ರಕಾರ ಸ್ನೇಕ್ ಪ್ಲಾಂಟ್ ಆಮ್ಲಜನಕದ ಹರಿವನ್ನು ಹೆಚ್ಚಿಸುವುದರಿಂದ ಗಾಳಿ ಶುದ್ಧವಾಗುತ್ತದೆ. ಇದನ್ನು ಕಿಟಕಿಯ ಹತ್ತಿರ ಇಡುವುದರಿಂದ ಶಾಂತ ವಾತಾವರಣ ನಿರ್ಮಾಣವಾಗುತ್ತದೆ.
- ತುಳಸಿ: ತುಳಸಿ ಸಸ್ಯವು ಹಿಂದು ಧರ್ಮದಲ್ಲಿ ಪವಿತ್ರ ಸ್ಥಾನವನ್ನು ಪಡೆದಿದೆ. ಇದು ಕೇವಲ ಧಾರ್ಮಿಕ ದೃಷ್ಟಿಯಿಂದಲೇ ಅಲ್ಲ, ಆರೋಗ್ಯದ ದೃಷ್ಟಿಯಿಂದಲೂ ಉಪಯುಕ್ತ. ತುಳಸಿಯ ಎಲೆಗಳು ಹೆಚ್ಚು ಪ್ರಮಾಣದ ಆಮ್ಲಜನಕ ಬಿಡುಗಡೆಮಾಡುತ್ತವೆ, ಹೀಗಾಗಿ ಮನೆಯಲ್ಲಿ ಶುದ್ಧ ಗಾಳಿ ಲಭ್ಯವಾಗುತ್ತದೆ. ಪೂರ್ವ ದಿಕ್ಕಿನಲ್ಲಿ ಇಡುವುದು ಅತ್ಯಂತ ಶುಭಕರ.