Monday, November 10, 2025

Vastu | ಮನೆಯ ಗೇಟ್ ಮುಂದೆ ಈ ವಸ್ತುಗಳನ್ನು ತಪ್ಪಿಯೂ ಇಡೋಕೆ ಹೋಗ್ಬೇಡಿ! ನೆಮ್ಮದಿ ನಾಶವಾಗುತ್ತೆ ಖಂಡಿತ

ಮನೆ ಎನ್ನುವುದು ಕೇವಲ ನಾವು ವಾಸಿಸುವ ಸ್ಥಳವಲ್ಲ ಅದು ನಮ್ಮ ಜೀವನದ ಶಕ್ತಿ, ಸಂತೋಷ ಮತ್ತು ಸಮೃದ್ಧಿಯ ಮೂಲವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಪ್ರತಿಯೊಂದು ಭಾಗವು ಶಕ್ತಿಯ ಕೇಂದ್ರವಾಗಿದ್ದು, ಅದರ ಸರಿಯಾದ ದಿಕ್ಕು ಮತ್ತು ವಸ್ತುಗಳ ಅಳವಡಿಕೆ ನಮ್ಮ ಜೀವನದ ಪ್ರಗತಿ ಅಥವಾ ಹಿನ್ನಡೆಯನ್ನು ನೇರವಾಗಿ ಪ್ರಭಾವಿಸುತ್ತದೆ. ವಿಶೇಷವಾಗಿ, ಮನೆಯ ಮುಖ್ಯ ಗೇಟ್ ಅಥವಾ ಮುಖ್ಯ ಬಾಗಿಲು ಅತ್ಯಂತ ಮಹತ್ವದ್ದಾಗಿದೆ. ಅದು ಧನ, ಆರೋಗ್ಯ ಮತ್ತು ಶಾಂತಿಯ ಶಕ್ತಿಗಳನ್ನು ಮನೆಗೆ ಕರೆತರುತ್ತದೆ ಎಂಬ ನಂಬಿಕೆ ಇದೆ. ಆದರೆ ಕೆಲವು ವಸ್ತುಗಳು ಗೇಟ್ ಬಳಿ ಇದ್ದರೆ ನಕಾರಾತ್ಮಕ ಪರಿಣಾಮ ಬೀರುತ್ತವೆ.

ಕಸದ ಬುಟ್ಟಿ:

ಯಾವುದೇ ಕಾರಣಕ್ಕೂ ಮನೆಯ ಗೇಟ್ ಅಥವಾ ಅದರ ಎದುರಿಗೆ ಕಸದ ಬುಟ್ಟಿ ಇಡಬಾರದು. ವಾಸ್ತು ಪ್ರಕಾರ ಇದು ಲಕ್ಷ್ಮಿ ದೇವಿಯ ಕೋಪಕ್ಕೆ ಕಾರಣವಾಗಬಹುದು. ಮತ್ತು ಹಣಕಾಸಿನ ಸಮಸ್ಯೆಗಳು ಎದುರಾಗುತ್ತವೆ.

ಕಲ್ಲು ಅಥವಾ ಕಂಬ (Obstructions):

ಮುಖ್ಯ ದ್ವಾರದ ಮುಂದೆ ಕಲ್ಲು, ಕಂಬ ಅಥವಾ ಬೃಹತ್ ವಸ್ತು ಇರಬಾರದು. ಇದು ಸಕಾರಾತ್ಮಕ ಶಕ್ತಿಗಳ ಪ್ರವೇಶವನ್ನು ತಡೆದು ಮನೆಯಲ್ಲಿ ಶಾಂತಿ ಮತ್ತು ಪ್ರಗತಿಗೆ ಅಡ್ಡಿಯಾಗುತ್ತದೆ.

ಪೆಟ್ರೋಲ್ ಪಂಪ್ ಅಥವಾ ಮೆಕ್ಯಾನಿಕ್ ಶಾಪ್:

ಮನೆಯ ಗೇಟ್ ಎದುರು ಪೆಟ್ರೋಲ್ ಬಂಕ್ ಅಥವಾ ಗ್ಯಾರೇಜ್ ಇದ್ದರೆ ಅದು ವಾಸ್ತುದೋಷ ಉಂಟುಮಾಡುತ್ತದೆ. ಇದರಿಂದ ಕುಟುಂಬ ಸದಸ್ಯರ ನಡುವೆ ಕಲಹ, ಅಡಚಣೆ ಮತ್ತು ಆರ್ಥಿಕ ನಷ್ಟ ಉಂಟಾಗುತ್ತದೆ.

ಬಳ್ಳಿ ಗಿಡಗಳು ಅಥವಾ ಹಳೆಯ ಮನೆ:

ಮುಖ್ಯ ಬಾಗಿಲಿಗೆ ಬಳ್ಳಿಗಳು ಅಥವಾ ಹಾನಿಗೊಳಗಾದ ಗಿಡಗಳು ಇಡುವುದು ಒಳ್ಳೆಯದಲ್ಲ. ಇದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸಿ ಮನೆಯಲ್ಲಿ ಅಶಾಂತಿಯನ್ನುಂಟುಮಾಡುತ್ತದೆ. ಹಳೆಯ, ಹಾಳಾದ ಮನೆ ಎದುರಿದ್ದರೂ ವಾಸ್ತುದೋಷ ಉಂಟಾಗಬಹುದು.

ದೇವರ ಫೋಟೋ ಅಥವಾ ಮೂರ್ತಿ:

ಮುಖ್ಯ ಗೇಟ್‌ ಮೇಲೆ ಅಥವಾ ಅದರ ಹೊರಗೆ ದೇವರ ಫೋಟೋ ಹಾಕಬಾರದು. ಇದು ವಾಸ್ತುವಿನ ಪ್ರಕಾರ ಅಶುಭ ಫಲ ನೀಡಬಹುದು. ಬದಲಾಗಿ ಸ್ಫಟಿಕ ಚೆಂಡು ಅಥವಾ ಕೆಂಪು ರಿಬ್ಬನ್ ಕಟ್ಟುವುದು ಉತ್ತಮ.

error: Content is protected !!