ಪ್ರತಿಯೊಬ್ಬರಿಗೂ ಮನೆಗೆ ಸಮೃದ್ಧಿ, ಶಾಂತಿ ಮತ್ತು ಹಣದ ಹರಿವು ಹೆಚ್ಚಾಗಬೇಕು ಎನ್ನೋ ಆಸೆ ಇದ್ದೆ ಇರುತ್ತೆ. ಇದಕ್ಕಾಗಿ ಹಲವರು ವಾಸ್ತು ಶಾಸ್ತ್ರದ ಉಪಾಯಗಳನ್ನು ಅನುಸರಿಸುತ್ತಾರೆ. ಅಂತಹ ಪವಾಡಕಾರಿ ಗಿಡಗಳಲ್ಲಿ ಮನಿ ಪ್ಲಾಂಟ್ ಎಂಬುದು ಪ್ರಮುಖವಾದದು. ಇದು ಕೇವಲ ಅಲಂಕಾರಿಕ ಗಿಡವಲ್ಲ, ಬದಲಾಗಿ ವಾಸ್ತು ಪ್ರಕಾರ ಧನಸಂಪತ್ತಿಗೆ ದಾರಿ ತೆರೆದು ಮನೆಗೆ ಸಕಾರಾತ್ಮಕ ಶಕ್ತಿಯನ್ನು ತರುವಂತದ್ದು ಎಂಬ ನಂಬಿಕೆ ಇದೆ.
ಮನಿ ಪ್ಲಾಂಟ್‌ನ್ನು ಏಕೆ ಇಡಬೇಕು?
ವಾಸ್ತು ಶಾಸ್ತ್ರದ ಪ್ರಕಾರ ಮನಿ ಪ್ಲಾಂಟ್ ಗಿಡವು ದೇವಿ ಲಕ್ಷ್ಮಿಯ ಪ್ರೀತಿಪಾತ್ರವಾಗಿದ್ದು, ಮನೆಯಲ್ಲಿ ಧನವೃದ್ಧಿ, ಶಾಂತಿ ಮತ್ತು ಶುಭಫಲಗಳನ್ನು ತರಬಲ್ಲದು. ಇದನ್ನು ಸರಿಯಾದ ಸ್ಥಳ ಮತ್ತು ದಿಕ್ಕಿನಲ್ಲಿ ಇಟ್ಟರೆ ಆರ್ಥಿಕ ಸಮೃದ್ಧಿಯು ಜೋರು ಪಡೆಯುತ್ತದೆ ಎಂಬ ನಂಬಿಕೆಯಿದೆ.
ಸರಿ ದಿಕ್ಕು ಯಾವುದು?
ವಾಸ್ತು ಶಾಸ್ತ್ರದ ಪ್ರಕಾರ ಮನಿ ಪ್ಲಾಂಟ್ ಗಿಡವನ್ನು ದಕ್ಷಿಣ-ಪೂರ್ವ ದಿಕ್ಕಿನಲ್ಲಿ ಇಡುವುದು ಅತ್ಯಂತ ಲಾಭಕಾರಿ. ಈ ದಿಕ್ಕು ಗಣೇಶ ದೇವರ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಗಿಡ ಇಡುವುದರಿಂದ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ, ಧನವೃದ್ಧಿ ಸಾಧ್ಯವಾಗುತ್ತದೆ.
ನೆಡುವ ವಿಧಾನ ಹೇಗೆ?
ಗಿಡವನ್ನು ಮನೆಗೆ ತರುವ ಮುನ್ನ, ಅದನ್ನು ದೇವಿ ಲಕ್ಷ್ಮಿಯ ಮುಂದೆ ಇಟ್ಟು ಆಶೀರ್ವಾದ ಪಡೆಯಬೇಕು. ನಂತರ ಗಾಜಿನ ಬಾಟಲಿ ಅಥವಾ ಆಕರ್ಷಕ ಕುಂಡದಲ್ಲಿ ನೆಡಬೇಕು. ಗಿಡವನ್ನು ನೆಡುವಾಗ ಯಾರೂ ನೋಡದಂತೆ ನೋಡಿಕೊಳ್ಳುವುದು ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದು ಗೃಹಸ್ಥರಲ್ಲಿ ಸಕಾರಾತ್ಮಕ ಶಕ್ತಿಯನ್ನು ಉಂಟುಮಾಡುತ್ತದೆ.
ಮನಿ ಪ್ಲಾಂಟ್ ಖರೀದಿಸುವ ನಿಯಮಗಳು
ವಾಸ್ತು ಪ್ರಕಾರ, ಮನಿ ಪ್ಲಾಂಟ್‌ನ್ನು ಯಾವಾಗಲೂ ಮಾರುಕಟ್ಟೆಯಿಂದ ಖರೀದಿಸಿ ತರಬೇಕು. ಇದನ್ನು ಯಾಚಿಸಿಕೊಂಡು ಅಥವಾ ಕದ್ದು ತರುವುದು ಎಂದಿಗೂ ಮಾಡಬಾರದು. ಈ ಅಕ್ರಮದಿಂದ ಮನೆಯಲ್ಲಿ ಆರ್ಥಿಕ ನಷ್ಟ ಸಂಭವಿಸಬಹುದು ಎಂಬ ನಂಬಿಕೆಯಿದೆ.
ಧನದ ಸಂಕೇತವಾದ ಗಿಡ
ಮನಿ ಪ್ಲಾಂಟ್ ಧನದ ಮತ್ತು ಸೌಭಾಗ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಸಕಾಲದಲ್ಲಿ, ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ನಿಯಮದಂತೆ ಇದನ್ನು ಇಡುವುದರಿಂದ, ಮನೆಯಲ್ಲಿ ಶಾಂತಿ, ನೆಮ್ಮದಿ ಮತ್ತು ಆರ್ಥಿಕ ಸ್ಥಿರತೆ ನೆಲೆಗೊಳ್ಳುತ್ತದೆ.
ಹೀಗಾಗಿ, ಮನಿ ಪ್ಲಾಂಟ್‌ನ್ನು ಕೇವಲ ಅಲಂಕಾರ ಗಿಡವೆಂದು ನೋಡದೆ, ಧನ ಲಕ್ಷ್ಮಿಯ ಒಂದು ಪ್ರಭಾವಶಾಲಿ ಸ್ವರೂಪದ ಸಸ್ಯವೆಂದು ಪರಿಗಣಿಸಿ ಮನೆಗೆ ತರುವುದು ಜೀವನದ ಪರಿಪೂರ್ಣತೆಗೆ ಸಹಕಾರಿಯಾಗಿದೆ.