Vastu | ಮಕ್ಕಳ ಮುಂದಿನ ಭವಿಷ್ಯ ಒಳ್ಳೆದಾಗ್ಬೇಕು ಅಂದ್ರೆ ಮನೆಯಲ್ಲಿ ಈ ವಾಸ್ತು ನಿಯಮಗಳನ್ನು ಅನುಸರಿಸಿ

ಮಕ್ಕಳನ್ನು ಉತ್ತಮವಾಗಿ ರೂಪಿಸಬೇಕು ಅಂದರೆ ಶಿಕ್ಷಣ ಅತ್ಯಂತ ಪ್ರಮುಖವಾಗಿದೆ. ಆದರೆ, ಮಕ್ಕಳ ಅಧ್ಯಯನದಲ್ಲಿ ಏಕಾಗ್ರತೆ ಇಲ್ಲದಿದ್ದರೆ ಪೋಷಕರಿಗೂ ಬೇಸರ. ಇಂತಹ ಸಂದರ್ಭದಲ್ಲಿ, ನೀವು ಮಕ್ಕಳು ಓದುವ ಕೋಣೆಯ ವಾಸ್ತು ಕ್ರಮಗಳನ್ನು ಸರಿಪಡಿಸಿದರೆ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎನ್ನುವುದು ವಾಸ್ತುಶಾಸ್ತ್ರದ ನಂಬಿಕೆ. ಮನೆಯಲ್ಲಿಯೇ ಕೆಲವೊಂದು ಸರಳವಾದ ನಿಯಮಗಳನ್ನು ಪಾಲಿಸಿದರೆ ಮಕ್ಕಳ ಮನಸ್ಸಿನಲ್ಲಿ ಶಾಂತಿ ಬಂದು, ಓದುವ ಪ್ರತಿ ವಿಷಯದಲ್ಲಿಯೂ ಸ್ಪಷ್ಟತೆ ಮೂಡುತ್ತದೆ.

Top Vastu Tips for Your Kids Study Room - Indigo Paints

ಅಧ್ಯಯನ ಕೋಣೆಯಲ್ಲಿ ಇವು ಇರಬಾರದು
ಮಕ್ಕಳ ಓದುವ ಮನಸ್ಸಿಗೆ ಅಡ್ಡಿಯಾಗುವಂತಹ ವಸ್ತುಗಳನ್ನು ಅಧ್ಯಯನ ಕೋಣೆಯಲ್ಲಿ ಇಡಬಾರದು. ಟಿವಿ, ಫ್ಯಾಷನ್ ಮ್ಯಾಗಜೀನ್, ಆಟಿಕೆ, ಅಥವಾ ಕಸ ಇವು ಮಕ್ಕಳ ಗಮನವನ್ನು ಬೇರೆಡೆ ಸೆಳೆಯುತ್ತವೆ. ಅಧ್ಯಯನ ಕೋಣೆ ಸ್ವಚ್ಛವಾಗಿದ್ದು, ಬೆಳಕು ಪ್ರವೇಶಿಸಬೇಕು. ಸೂರ್ಯನ ಪ್ರಕಾಶ ಅಧ್ಯಯನಕ್ಕೆ ಶ್ರೇಷ್ಠವಾಗಿದೆ.

ಕೋಣೆಯ ಬಣ್ಣಕ್ಕೂ ಮಹತ್ವವಿದೆ
ಮಕ್ಕಳ ಅಧ್ಯಯನ ಕೋಣೆಯ ಬಣ್ಣಗಳು ಗಾಢವಾಗಿದ್ದರೆ, ಅದು ಅವರ ಮನಸ್ಸಿನಲ್ಲಿ ತೊಂದರೆ ಉಂಟುಮಾಡಬಹುದು. ಕಪ್ಪು, ಕೆಂಪು, ಗಾಢ ನೀಲಿ ಬಣ್ಣಗಳನ್ನು ತಪ್ಪಿ ಹೋಗಿ, ಬದಲಿಗೆ ಲೈಟ್ ಗ್ರೀನ್, ಲೈಟ್ ಯೆಲ್ಲೋ ಅಥವಾ ಬಿಳಿ ಬಣ್ಣಗಳನ್ನು ಆಯ್ಕೆಮಾಡಿ. ಇವು ಮನಸ್ಸಿಗೆ ಶಾಂತಿ ನೀಡುತ್ತವೆ.

Study Room Vastu Tips For Your Children | DesignCafe

ವಾಸ್ತು ಪ್ರಕಾರ ಶ್ರೇಷ್ಠ ದಿಕ್ಕು ಯಾವುದು?
ಈಶಾನ್ಯ ದಿಕ್ಕಿನಲ್ಲಿ ಅಧ್ಯಯನ ಕೋಣೆಯನ್ನು ಹೊಂದಿದ್ದರೆ ಅದು ಅತ್ಯುತ್ತಮ. ಈ ದಿಕ್ಕು ಗುರು, ಬುದ್ಧಿ, ಜ್ಞಾನದ ಸಂಕೇತವಾಗಿರುವುದರಿಂದ, ಮಕ್ಕಳ ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿಗೆ ಉತ್ತಮ.

ಸ್ಟಡಿ ಟೇಬಲ್ ಇಡುವಾಗ ಈ ನಿಯಮ ಪಾಲಿಸಿ
ಮಕ್ಕಳ ಸ್ಟಡಿ ಟೇಬಲ್ ಗೋಡೆಗೆ ಒರಗಿಸಿ ಇಡಬಾರದು. ಟೇಬಲ್ ಮೇಲೆ ಪುಸ್ತಕಗಳು ಮತ್ತು ಅಧ್ಯಯನಕ್ಕೆ ಸಂಬಂಧಪಟ್ಟ ವಸ್ತುಗಳಷ್ಟೆ ಇರಬೇಕು. ತಾಯಿ ಸರಸ್ವತಿಯ ಚಿತ್ರವೊಂದನ್ನು ಟೇಬಲ್ ಮೇಲೆ ಇರಿಸಿದರೆ ಅದು ಪವಿತ್ರತೆಯೂ ಹಾಗೂ ಪಾಠಕ್ಕೆ ಅನುಕೂಲವೂ ಆಗುತ್ತದೆ.

Lockdown Day 23: Create the perfect study room for your kids

ಸ್ಟಡಿ ರೂಮ್‌ನಲ್ಲಿ ಏನು ಮಾಡಬಾರದು?
ಅಧ್ಯಯನ ಕೋಣೆಯಲ್ಲಿ ಊಟಮಾಡುವುದು ಅಥವಾ ಶೂ, ಚಪ್ಪಲಿ ಧರಿಸಿ ಒಳ ಹೋಗುವುದು ತಪ್ಪು. ಈ ಕೊಠಡಿಯಲ್ಲಿ ಶುದ್ಧತೆ ಇರಬೇಕು, ಇದರ ಪರಿಣಾಮವಾಗಿ ಕೋಣೆಯ ಶಕ್ತಿಯು ಶುದ್ಧವಾಗಿದ್ದು ಮಕ್ಕಳ ಮೆಮೊರಿ ಪವರ್ ಹಾಗೂ ಏಕಾಗ್ರತೆ ಹೆಚ್ಚಾಗುತ್ತದೆ.

ವಾಸ್ತುಶಾಸ್ತ್ರದ ಸರಳ ನಿಯಮಗಳನ್ನು ಅನುಸರಿಸುವ ಮೂಲಕ ಮಕ್ಕಳ ಅಧ್ಯಯನದಲ್ಲಿ ಶ್ರೇಷ್ಠ ಫಲಿತಾಂಶಗಳನ್ನು ಪಡೆಯಬಹುದು. ಮನೆಯಲ್ಲಿ ಅಧ್ಯಯನಕ್ಕೆ ಉತ್ತಮವಾದ ವಾತಾವರಣವನ್ನು ನಿರ್ಮಿಸಿದರೆ, ಮಕ್ಕಳು ವಿದ್ಯಾಭ್ಯಾಸದಲ್ಲಿ ಉತ್ತುಂಗ ತಲುಪುತ್ತಾರೆ ಎಂಬ ನಂಬಿಕೆ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!