ಹೊಸ ಮನೆಯ ಕನಸು ಸಾಕಾರಗೊಳ್ಳುವುದು ಜೀವನದ ಪ್ರಮುಖ ಹಂತ. ಮನೆ ಕಟ್ಟುವುದು ಮಾತ್ರವಲ್ಲ, ಅದರಲ್ಲಿ ಸುಖ, ಸಮಾಧಾನ ಮತ್ತು ಶಾಂತಿಯುತ ಜೀವನವೂ ಸಾಧ್ಯವಾಗಬೇಕಲ್ಲವೆ? ಅದಕ್ಕಾಗಿ ಗೃಹ ಪ್ರವೇಶದ ಸಂದರ್ಭದಲ್ಲಿ ಕೆಲವೊಂದು ವಾಸ್ತು ನಿಯಮಗಳನ್ನು ಪಾಲಿಸುವುದು ಅತಿಮುಖ್ಯ. ಹಿಂದು ಧರ್ಮ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ಗೃಹ ಪ್ರವೇಶವೇ ಮನೆಯ ಭವಿಷ್ಯವನ್ನು ನಿರ್ಧರಿಸಬಹುದಾದ ಒಂದು ಶುಭ ಆರಂಭವಾಗಿದೆ.
ಹೊಸ ಮನೆಗೆ ಮೊದಲ ಬಾರಿ ಕಾಲಿಟ್ಟಾಗ ಗಂಗಾಜಲ ತುಂಬಿದ ಮಡಕೆಯನ್ನು ಕೈಯಲ್ಲಿ ಹಿಡಿದು ಒಳಗೆ ಪ್ರವೇಶಿಸಬೇಕು. ಗಂಗಾಜಲ ಶುದ್ಧತೆ ಮತ್ತು ಪವಿತ್ರತೆಯ ಸಂಕೇತವಾಗಿದ್ದು, ಮನಸ್ಸಿಗೂ ಶಾಂತಿ ತರಲಿದೆ, ಮನೆಯಲ್ಲಿ ಶಕ್ತಿಯ ಅಲೆ ಹರಡುತ್ತದೆ.
ಹಸು ಮತ್ತು ಕರುಗಳನ್ನು ಮನೆಗೆ ಮೊದಲು ಕರೆತರುವ ಸಂಪ್ರದಾಯವಿದೆ. ಇದರಿಂದ ಸಂತಾನಸೌಖ್ಯ ಮತ್ತು ಆರ್ಥಿಕ ಸಿರಿವಂತಿಕೆ ಏರಿಕೆಯಾಗುತ್ತದೆ ಎಂಬ ನಂಬಿಕೆ ಇದೆ.
ಅಡುಗೆಮನೆಯಲ್ಲಿ ಸಿಹಿತಿಂಡಿಗಳನ್ನು ತಯಾರಿಸುವುದರಿಂದ ಶುಭದ ಪ್ರಾರಂಭವಾಗುತ್ತದೆ. ಇದು ಮನೆಗೆ ಸುಖ-ಶಾಂತಿ ತರಲಿದ್ದು, ಮುಂದಿನ ದಿನಗಳಲ್ಲಿ ಸಂತೋಷವನ್ನೇ ತುಂಬಲಿದೆ.
ಗೃಹ ಪ್ರವೇಶದ ನಂತರ ಕೆಲ ಗಂಟೆಗಳ ಕಾಲ ಬಾಗಿಲು-ಕಿಟಕಿಗಳನ್ನು ತೆರೆದಿಡಬೇಕು. ಇದರಿಂದ ದೈವಿಕ ಶಕ್ತಿಗಳ ಪ್ರವೇಶವಾಗುತ್ತೆ ಎಂಬ ನಂಬಿಕೆ ಇದೆ. ಮಹಾಲಕ್ಷ್ಮಿಯ ವಾಸಕ್ಕೂ ಇದು ಅನುಕೂಲವೆನ್ನಲಾಗುತ್ತದೆ.
ತುಳಸಿ ಗಿಡವನ್ನು ಗೃಹ ಪ್ರವೇಶದ ವೇಳೆ ಜೊತೆ ಕರೆದುಕೊಂಡು ಹೋಗಿ. ಇದು ಮನೆಗೆ ಶುದ್ಧತೆ, ಆರೈಕೆ ಹಾಗೂ ಧಾರ್ಮಿಕ ಶಕ್ತಿಯ ವಾತಾವರಣವನ್ನ ತರುತ್ತದೆ. ಹಾಗೆಯೇ ಈ ಗಿಡ ಶ್ರೀಮಹಾಲಕ್ಷ್ಮಿಯ ಆರಾಧನೆಯಾಗಿದೆ.
ಮಾಡಬೇಕು ಹಾಗೂ ಮಾಡಬಾರದು ಎಂಬ ಕೆಲವು ವಾಸ್ತು ನಿಯಮಗಳು:
ಮನೆಯು ಪೂರ್ಣವಾಗಿ ನಿರ್ಮಾಣವಾಗಿರಬೇಕು. ಅಂದರೆ ಛಾವಣಿ, ಬಾಗಿಲು, ಕಿಟಕಿಗಳು ಕಡ್ಡಾಯ.
ಅಡುಗೆಮನೆ ಅಡುಗೆ ಮಾಡಲು ಸಿದ್ಧವಾಗಿರಬೇಕು, ಆದರೆ ಪೀಠೋಪಕರಣಗಳನ್ನು ತಕ್ಷಣ ಸ್ಥಳಾಂತರಿಸಬಾರದು.
ದೃಷ್ಠಿ ತೆಗೆಯುವುದು ಮರೆತರೆ ಪಾಪ. ತೆಂಗಿನಕಾಯಿ, ನಿಂಬೆ ಅಥವಾ ಬೂದು ಕುಂಬಳಕಾಯಿ ಬಳಸಬಹುದು.
ಮನೆಗೆ ಬಲಗಾಲಿನಿಂದ ಪ್ರವೇಶಿಸಿ.
ಪೂಜೆಯ ನಂತರ ತಕ್ಷಣ ಮನೆ ಬಿಟ್ಟು ಹೋಗಬಾರದು.
ಗರ್ಭಿಣಿಯರು ಪೂಜೆಯಲ್ಲಿ ಭಾಗವಹಿಸಬಾರದು.
ಪೂಜಾ ಕಾರ್ಯ ಮುಗಿದ ನಂತರ ಪುರೋಹಿತರಿಗೆ ದಕ್ಷಿಣೆ ನೀಡುವುದು ನಿಯಮ.