ನಿದ್ರೆ ಮಾನವನ ದೈನಂದಿನ ಆರೋಗ್ಯಕ್ಕೆ ಮಾತ್ರವಲ್ಲ, ಜೀವನ ಶೈಲಿಯ ಪ್ರಮುಖ ಅಂಶ ಎಂದರೂ ತಪ್ಪಾಗಲಾರದು. ನಿದ್ರೆಯ ಕೊರತೆಯು ದೈಹಿಕ, ಮಾನಸಿಕ ಆರೋಗ್ಯಕ್ಕೆ ತೊಂದರೆ ಉಂಟುಮಾಡಬಹುದು ಎನ್ನುವುದು ವೈದ್ಯಕೀಯ ವಾದ. ಆದರೆ ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ನಿದ್ರೆ ಮಾತ್ರವಲ್ಲ, ನಿದ್ರೆಯ ಸಮಯದಲ್ಲಿ ನಮ್ಮ ದೈಹಿಕ ಸ್ಥಿತಿ, ಮನೋಭಾವ ಹಾಗೂ ಹಾಸಿಗೆಯ ಬಳಿ ಇಡುವ ಕೆಲವು ವಸ್ತುಗಳು ನಮ್ಮ ಅದೃಷ್ಟಕ್ಕೂ ಸಂಬಂಧವಿರುತ್ತವೆಯಂತೆ.
ಹಾಲಿನ ಲೋಟದಿಂದ ಹಣದ ಹರಿವು
ಜ್ಯೋತಿಷ್ಯ ಪ್ರಕಾರ, ಪ್ರತಿದಿನ ರಾತ್ರಿ ಮಲಗುವ ಮೊದಲು ಹಾಸಿಗೆಯ ಪಕ್ಕದಲ್ಲಿ ಒಂದು ಲೋಟ ಹಾಲನ್ನು ಇಡುವುದು ಉತ್ತಮ ಎನ್ನಲಾಗುತ್ತದೆ. ಈ ಹಾಲನ್ನು ಮುಂಜಾನೆ ಎದ್ದು ಮುಳ್ಳಿನ ಗಿಡಕ್ಕೆ ಅರ್ಪಿಸಿದರೆ ಅದೃಷ್ಟದ ಚಕ್ರ ಜಾಗೃತವಾಗುತ್ತದೆ ಎನ್ನಲಾಗಿದೆ. ಇದರ ಪರಿಣಾಮವಾಗಿ ಹಣದ ಅಭಿವೃದ್ದಿ, ಆರ್ಥಿಕ ಸಮೃದ್ಧಿಗೆ ಇದು ಸಹಕಾರಿಯಾಗುತ್ತದೆ. ಇದನ್ನು 7 ಭಾನುವಾರ ನಿರಂತರವಾಗಿ ಮಾಡಿದರೆ ವರ್ಷವಿಡೀ ಹಣದ ಅಭಾವ ಇಲ್ಲದಿರಬಹುದು ಎಂಬ ನಂಬಿಕೆ ಇದೆ.
ಚಾಕು ಅಥವಾ ಕಬ್ಬಿಣದ ವಸ್ತು ಇಟ್ಟರೆ ದುಃಸ್ವಪ್ನ ದೂರ
ಅನೆಕ ಬಾರಿ ನಿದ್ದೆಯ ಮಧ್ಯೆ ಹಠಾತ್ತನೆ ಎದ್ದರೆ ಅಥವಾ ಭಯಾನಕ ಕನಸು ಕಂಡರೆ ನಾವು ಆತಂಕಕ್ಕೆ ಒಳಗಾಗುತ್ತೇವೆ. ಇಂತಹ ಸಂದರ್ಭಗಳಲ್ಲಿ ಚಾಕು ಅಥವಾ ಯಾವುದೇ ಚೂಪಾದ ಕಬ್ಬಿಣದ ವಸ್ತುವನ್ನು ದಿಂಬಿನ ಕೆಳಗೆ ಇಟ್ಟು ಮಲಗುವುದು ಉತ್ತಮ ಎನ್ನಲಾಗಿದೆ. ಇದು ದುಃಸ್ವಪ್ನಗಳಿಂದ ರಕ್ಷಣೆ ನೀಡುತ್ತದೆ ಮತ್ತು ರಾತ್ರಿಯ ನಿದ್ರೆಯನ್ನು ಶಾಂತಿಯುತವಾಗಿಸುತ್ತದೆ.
ಒಂದು ರೂಪಾಯಿ ನಾಣ್ಯ ಮತ್ತು ಕಲ್ಲು ಉಪ್ಪಿನ ಪ್ರಭಾವ
ಮನೆಗೆ ಆರೋಗ್ಯ ಮತ್ತು ಶುಭಫಲ ತರುವಂತೆ ಮಲಗುವ ಕೋಣೆಯಲ್ಲಿ ಒಂದು ರೂಪಾಯಿ ನಾಣ್ಯವನ್ನು ದಿಂಬಿನ ಕೆಳಗೆ ಇಡಬೇಕು. ಜೊತೆಗೆ ಗಾಜಿನ ಬಟ್ಟಲಿನಲ್ಲಿ ಕಲ್ಲು ಉಪ್ಪು ಇಡುವುದು ವಾಸ್ತು ಪ್ರಕಾರ ಉತ್ತಮ ಪರಿಣಾಮ ತರುತ್ತದೆ. ಮನೆಯಲ್ಲಿ ಸಂಚರಿಸುವ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಬಹುದು. ಪ್ರತಿದಿನ ಅಥವಾ ವಾರಕ್ಕೊಮ್ಮೆ ಉಪ್ಪನ್ನು ಬದಲಾಯಿಸುವುದು ಉತ್ತಮ ಎನ್ನಲಾಗಿದೆ.
ಬೆಳ್ಳುಳ್ಳಿ-ಲವಂಗ ಶಕ್ತಿ
ನೀವು ನಿದ್ರೆಗೆ ಹೋಗುವ ಮುನ್ನ ನಿಮ್ಮ ದಿಂಬಿನ ಕೆಳಗೆ ಒಂದು ಲವಂಗ ಮತ್ತು ಒಂದು ಬೆಳ್ಳುಳ್ಳಿ ಇಡಬೇಕು. ಇದರ ತೀವ್ರವಾದ ವಾಸನೆಯು ಮನೆಯಿಂದ ಎಲ್ಲ ರೀತಿಯ ಕಿರಿಕಿರಿಯನ್ನು, ದೋಷಕಾರಕ ಶಕ್ತಿಗಳನ್ನು ಹೊರಹಾಕಿ ಮನಸ್ಸು ಶಾಂತವಾಗಲು ಸಹಾಯ ಮಾಡುತ್ತದೆ. ಜತೆಗೆ ಉತ್ತಮ ನಿದ್ರೆಗೆ ಸಹ ನೆರವಾಗುತ್ತದೆ ಎಂಬ ನಂಬಿಕೆ ಇದೆ.
ಇದಲ್ಲದೆ, ಇವು ಎಲ್ಲವೂ ಜ್ಯೋತಿಷ್ಯ, ವಾಸ್ತು ಮತ್ತು ಪುರಾಣಾಧಾರಿತ ನಂಬಿಕೆಗೆ ಒಳಪಟ್ಟದ್ದು. ವೈಜ್ಞಾನಿಕ ದೃಷ್ಟಿಕೋಣನದಿಂದ ದೃಢಪಡಿಸಲು ಯಾವುದೇ ಸಾಕ್ಷ್ಯವಿಲ್ಲ. ಆದರೂ ಧಾರ್ಮಿಕ ನಂಬಿಕೆ ಮತ್ತು ಮನಸ್ಸಿನ ಶಾಂತಿಗೆ ಸಹಕಾರಿಯಾಗಬಹುದಾದ ನೈಸರ್ಗಿಕ ವಿಧಾನವೆಂದು ಹಲವರು ಆಚರಿಸುತ್ತಾರೆ.
(Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)