ಪುರಾತನ ಚೀನೀ ಶಾಸ್ತ್ರವಾದ ಫೆಂಗ್ ಶೂಯಿ, ನಮ್ಮ ಸುತ್ತಲಿನ ವಾತಾವರಣ ಮತ್ತು ನಮ್ಮ ಜೀವನಶೈಲಿಯ ನಡುವೆ ಸಕಾರಾತ್ಮಕ ಸಮತೋಲನ ತರುವ ಹಳೆಯ ಕಲ್ಪನೆಯಾಗಿದೆ. ಭಾರತೀಯ ವಾಸ್ತು ಶಾಸ್ತ್ರದಂತೆ, ಇದು ಕೂಡ ಶಕ್ತಿ ಹರಿವಿನ ನಿಯಮಗಳನ್ನು ಹೊಂದಿದ್ದು, ಹಾನಿಕರ ಶಕ್ತಿಗಳನ್ನು ನಿವಾರಿಸಿ ಧನಾತ್ಮಕ ಶಕ್ತಿಯನ್ನು ಆಕರ್ಷಿಸುವತ್ತ ನಮ್ಮ ಮನೆಯನ್ನು ರೂಪಿಸುವುದರ ಫೆಂಗ್ ಶೂಯಿ ತತ್ವ.
ಬಿದಿರು ಗಿಡ:
ಸಂಪತ್ತು ಮತ್ತು ಶಕ್ತಿಯ ಸಂಕೇತವಾಗಿರುವ ಬಿದಿರು ಗಿಡವನ್ನು ಮನೆಯ ಆಗ್ನೇಯ ದಿಕ್ಕಿನಲ್ಲಿ ಇಡಬೇಕು. ಇದು ಆರ್ಥಿಕ ಬೆಳವಣಿಗೆಗೆ ಪೂರಕವಾಗಿದ್ದು, ಶಾಂತಿ ಹಾಗೂ ಸಮೃದ್ಧಿಯನ್ನು ತರುತ್ತದೆ ಎನ್ನಲಾಗುತ್ತದೆ.
ಸಿಟ್ರಿನ್ ಹರಳು:
ಇದು ‘ವ್ಯಾಪಾರಿ ಕಲ್ಲು’ ಎಂದೇ ಪರಿಚಿತ. ಧನ, ಯಶಸ್ಸು ಮತ್ತು ಹೊಸ ಅವಕಾಶಗಳಿಗಾಗಿ ಸಿಟ್ರಿನ್ ಕಲ್ಲನ್ನು ಕಛೇರಿಯಲ್ಲಿ ಅಥವಾ ಲಿವಿಂಗ್ ರೂಮ್‌ನಲ್ಲಿ ಇಡಬಹುದು. ಇದು ಉದ್ಯೋಗ ಮತ್ತು ವ್ಯಾಪಾರದಲ್ಲಿ ಲಾಭ ತರುವ ಶಕ್ತಿ ಹೊಂದಿದೆ ಎಂಬ ನಂಬಿಕೆ ಇದೆ.
ವಿಂಡ್ ಚೈಮ್ಸ್:
ಬಾಗಿಲು ಅಥವಾ ಕಿಟಕಿಯ ಹತ್ತಿರ ವಿಂಡ್ ಚೈಮ್ಸ್ ಇಡುವುದರಿಂದ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಮತ್ತು ಮನೆಯಲ್ಲಿ ಧನಾತ್ಮಕ ಶಕ್ತಿ ಹರಿಯುತ್ತದೆ. ಇದರ ಮೃದುವಾದ ಧ್ವನಿ ಮನಸ್ಸಿಗೆ ಶಾಂತಿಯನ್ನು ತರುತ್ತದೆ.
ಲಾಫಿಂಗ್ ಬುದ್ಧನ ಪ್ರತಿಮೆ:
ಲಾಫಿಂಗ್ ಬುದ್ಧಾ ಪ್ರತಿಮೆ ಮನೆಯ ಪ್ರಮುಖ ಸ್ಥಳದಲ್ಲಿ ಇರಿಸುವುದರಿಂದ ಸಂತೋಷ, ಧನ ಮತ್ತು ಶಾಂತಿ ಬರಲಿದೆ ಎಂಬ ನಂಬಿಕೆ ಇದೆ. ಈ ಪ್ರತಿಮೆ ನಗೆಯ ಮೂಲಕ ಧನಾತ್ಮಕತೆ ಹರಡುತ್ತದೆ.
ಮನಿ ಟ್ರೀ:
ಇದು ಹಣದ ಹರಿವಿಗೆ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಮನಿ ಟ್ರೀ ಅನ್ನು ಬಿಸಿನೆಸ್ ಎಂಟ್ರಿ ಅಥವಾ ಮನೆಗೆ ನಾನಾ ದಿಕ್ಕುಗಳಲ್ಲಿ ಇಡಬಹುದು, ವಿಶೇಷವಾಗಿ ಆಗ್ನೇಯ ಮೂಲೆಯಲ್ಲಿ ಇಡುವುದು ಉತ್ತಮ.
ಕೆಂಪು ಕವರ್:
ಚೀನೀ ಸಂಪ್ರದಾಯದ ಪ್ರಕಾರ, ಕೆಂಪು ಬಣ್ಣ ಶಕ್ತಿಯ ಹಾಗೂ ಅದೃಷ್ಟದ ಸಂಕೇತವಾಗಿದೆ. ಹಣವಿರುವ ಕೆಂಪು ಕವರ್ ಗಳನ್ನು ಮನೆಯಲ್ಲಿ ಇಡುವುದು ಧನಕಷ್ಟ ನಿವಾರಣೆಗೆ ಸಹಾಯಕವಾಗಬಹುದು.
ಒಟ್ಟಿನಲ್ಲಿ, ಫೆಂಗ್ ಶೂಯಿಯ ತತ್ವಗಳು ಕೇವಲ ಮನೆಯನ್ನು ಅಲಂಕರಿಸುವುದಕ್ಕಷ್ಟೇ ಅಲ್ಲ, ನಿಮ್ಮ ಮನಸ್ಸಿನಲ್ಲಿ ಧನಾತ್ಮಕ ಶಕ್ತಿ ಹರಿಯುವಂತೆ ಮಾಡುತ್ತದೆ ಎಂಬ ನಂಬಿಕೆ ಇದೆ. (Disclaimer: ಈ ಮಾಹಿತಿಯು ಆಧ್ಯಾತ್ಮಿಕ ಹಾಗೂ ಸಂಪ್ರದಾಯಗಳ ನಂಬಿಕೆಯನ್ನು ಆಧರಿಸಿದೆ. ಇದಕ್ಕೆ ವೈಜ್ಞಾನಿಕ ದೃಷ್ಟಿಕೋನ ಅಥವಾ ಸಾಬೀತುಗಳಿಲ್ಲ. ಇದು ಸಂಪೂರ್ಣವಾಗಿ ನಂಬಿಕೆಯ ವಿಷಯವಾಗಿದೆ.)