ಇಂದು ಗುರು ಪೂರ್ಣಿಮಾ, ಈ ಹುಣ್ಣಿಮೆಗೆ ಹಿಂದೂ ಧರ್ಮದಲ್ಲಿ ಸಾಕಷ್ಟು ಮಹತ್ವ ಇದೆ. ಈ ಹುಣ್ಣಿಮೆಯಲ್ಲಿ ಗುರು ಹಾಗೂ ಚಂದ್ರದೇವನನ್ನು ಪ್ರಾರ್ಥಿಸುವುದರಿಂದ ಅಪೇಕ್ಷಿತ ಫಲ ನಿಮ್ಮದಾಗಲಿದೆ.
ಆಷಾಢ ತಿಂಗಳಲ್ಲಿ ಆಚರಿಸಲಾಗುವ ಹುಣ್ಣಿಮೆಯನ್ನು ಗುರು ಪೂರ್ಣಿಮಾ ಎನ್ನಾಗುತ್ತದೆ, ಇಂದು ಮಹರ್ಷಿ ವೇದ ವ್ಯಾಸರ ಜನ್ಮದಿನ. ಅದಕ್ಕಾಗಿಯೇ ಗುರು ಪೂರ್ಣಿಮೆಯನ್ನು ವ್ಯಾಸ ಪೂರ್ಣಿಮೆ ಎಂದೂ ಕರೆಯಲಾಗುತ್ತದೆ.
ಮೊದಲ ಬಾರಿಗೆ ವೇದವ್ಯಾಸರು ಎಲ್ಲಾ ನಾಲ್ಕೂ ವೇದಗಳನ್ನು ರಚಿಸಿ, ವೇದಗಳ ಜ್ಞಾನವನ್ನು ಮಾನವಕುಲಕ್ಕೆ ನೀಡಿದರು ಎನ್ನುವ ಪ್ರತೀತಿ ಇದೆ. ಈ ಕಾರಣಕ್ಕಾಗಿಯೇ ಅವರನ್ನು ಜಗತ್ತಿನ ಮೊದಲ ಗುರು ಎಂದು ನಂಬಲಾಗುತ್ತದೆ.
ಪ್ರತೀ ವರ್ಷವೂ ಜು.3ರಂದು ಹುಣ್ಣಿಮೆಯನ್ನು ಆಚರಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಹುಣ್ಣಿಮೆಯ ಅವಧಿ 2ರ ರಾತ್ರಿ 8:30ಕ್ಕೆ ಪ್ರಾರಂಭವಾಗಿ ಇಂದು ಸಂಜೆ 5:08ಕ್ಕೆ ಕೊನೆಗೊಳ್ಳಲಿದೆ.
ಪ್ರಾಚೀನ ಕಾಲದಿಂದಲೂ ಗುರುಗಳಿಗೆ ಸಾಕಷ್ಟು ಮಹತ್ವ ಇದೆ, ಸಮಾಜ ಕಟ್ಟುವಲ್ಲಿ ಗುರುವಿನ ಪಾತ್ರ ಮಹತ್ವದ್ದಾಗಿದೆ. ಎಲ್ಲಾ ಗುರುಗಳಿಗೂ ಗುರು ಪೂರ್ಣಿಮೆಯ ಶುಭಾಷಯಗಳು