January15, 2026
Thursday, January 15, 2026
spot_img

ದಾಖಲೆಗಳೇ ಇಲ್ಲದೆ ರಸ್ತೆಗಿಳಿಯುತ್ತಿವೆ ವಾಹನಗಳು, ರಾಜ್ಯದಲ್ಲೇ ಕೇಸಸ್‌ ಹೆಚ್ಚು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೇಶದ ರಸ್ತೆಗಳಲ್ಲಿ ಸಂಚರಿಸುತ್ತಿರುವ ವಾಹನಗಳ ಪೈಕಿ ಬಹುಪಾಲು ವಾಹನಗಳು ಕಾನೂನುಬದ್ಧ ದಾಖಲೆಗಳನ್ನು ಹೊಂದಿಲ್ಲ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ರಸ್ತೆ ಸಾರಿಗೆ ಸಚಿವಾಲಯದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ದೇಶದಲ್ಲಿರುವ ಒಟ್ಟು 40.7 ಕೋಟಿ ವಾಹನಗಳ ಪೈಕಿ ಶೇ. 70 ಕ್ಕೂ ಹೆಚ್ಚು ವಾಹನಗಳು ನಿಯಮವನ್ನು ಉಲ್ಲಂಘಿಸಿವೆ. ಅದರಲ್ಲೂಪ್ರಮುಖವಾಗಿ ದ್ವಿಚಕ್ರಗಳಲ್ಲಿಯೇ ನಿಯಮ ಉಲ್ಲಂಘನೆ ಹೆಚ್ಚು.

ವಿಶೇಷವಾಗಿ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ , ಫಿಟ್ನೆಸ್ ಪ್ರಮಾಣಪತ್ರ ಅಥವಾ ವಾಹನ ವಿಮೆಯಂತಹ ಕಡ್ಡಾಯ ದಾಖಲೆಗಳನ್ನು ವಾಹನಗಳು ಹೊಂದಿಲ್ಲ ಎಂದು ಸಚಿವಾಲಯ ತಿಳಿಸಿದೆ.

ಕಳೆದ ವಾರ ಸಚಿವಾಲಯವು ಪ್ರತೀ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಮಾಹಿತಿ ರವಾನಿಸಿದೆ. ನಿಯಮ ಉಲ್ಲಂಘಿಸಿರುವ ವಾಹನಗಳಲ್ಲಿ ಸುಮಾರು 23.5 ಕೋಟಿ ವಾಹನಗಳು ದ್ವಿಚಕ್ರ ವಾಹನಗಳಾಗಿವೆ. ‘ವಾಹನ’ ಡೇಟಾಬೇಸ್‌ನಲ್ಲಿ ನೋಂದಾಯಿಸಲಾದ ಅನೇಕ ವಾಹನಗಳು ಕಾನೂನುಬದ್ಧವಾಗಿ ಅಥವಾ ತಾಂತ್ರಿಕವಾಗಿ ರಸ್ತೆಗೆ ಇಳಿಯಲು ಯೋಗ್ಯವಾಗಿಲ್ಲದಿದ್ದರೂ, ಅವುಗಳ ಸಂಖ್ಯೆ ದಾಖಲೆಗಳಲ್ಲಿ ಹೆಚ್ಚು ಇವೆ. ಈ ಹಿನ್ನೆಲೆಯಲ್ಲಿ ಡೇಟಾಬೇಸ್ ಅನ್ನು ಸ್ವಚ್ಛಗೊಳಿಸಲು ಸರ್ಕಾರ ನಿರ್ಧರಿಸಿದೆ.

ದೊಡ್ಡ ರಾಜ್ಯಗಳ ಪೈಕಿ ಕರ್ನಾಟಕದಲ್ಲಿಯೂ ಅತಿಹೆಚ್ಚು ನಿಯಮ ಮೀರಿರುವ ವಾಹನಗಳಿವೆ. ಒಟ್ಟು ವಾಹನಗಳ ಪೈಕಿ ಸುಮಾರು 40% ವಾಹನಗಳು ಅಗತ್ಯ ದಾಖಲೆಗಳಿಲ್ಲದೆ ರಸ್ತೆಗಿಳಿಯುತ್ತಿವೆ. ಇದರಿಂದ ಅಪರಾಧ ಪ್ರಮಾಣಗಳು ಹೆಚ್ಚುವುದಲ್ಲದೆ, ಸವರಾರೆ ಸಂಕಷ್ಟಕ್ಕೀಡಾಗುವ ಸಾಧ್ಯತೆ ಇದೆ.

ಕರ್ನಾಟಕದ ಹೊರತುಪಡಿಸಿ ದೊಡ್ಡ ರಾಜ್ಯಗಳಾದ ತಮಿಳುನಾಡು, ಮಧ್ಯಪ್ರದೇಶ, ಆಂಧ್ರಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಶೇ. 40 ಕ್ಕೂ ಹೆಚ್ಚು ನೋಂದಾಯಿತ ವಾಹನಗಳು ಸಕ್ರಿಯವಾಗಿದ್ದರೂ ನಿಯಮಗಳನ್ನು ಪಾಲಿಸುತ್ತಿಲ್ಲ.

Most Read

error: Content is protected !!