ಗುಡ್ಡ ಕುಸಿದು ಬಂದ್ ಆಗಿದ್ದ ಕುಮಟಾ-ಸಿದ್ದಾಪುರ ನಡುವೆ ವಾಹನ ಸಂಚಾರ ಆರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗುಡ್ಡ ಕುಸಿದು ಎರಡು ದಿನ ಬಂದ್ ಆಗಿದ್ದ ಕುಮಟಾ-ಸಿದ್ದಾಪುರ ನಡುವಿನ ವಾಹನ ಸಂಚಾರ ಪುನರಾರಂಭವಾಗಿದೆ.

ರಸ್ತೆ ಮೇಲೆ ಬಿದ್ದಿದ್ದ ಮರ, ಮಣ್ಣನ್ನು ಸಿಬ್ಬಂದಿ ತೆರವುಗೊಳಿಸಿದ್ದು ಇದೀಗ ರಸ್ತೆ ಸಂಚಾರಕ್ಕೆ ತಾಲ್ಲೂಕಾಡಳಿತ ಮುಕ್ತಗೊಳಿಸಿಕೊಟ್ಟಿದೆ. ಕುಮಟಾ-ಸಿದ್ದಾಪುರ ರಸ್ತೆಯ ಉಳ್ಳೂರುಮಠ ಸಮೀಪ ಗುಡ್ಡ ಕುಸಿದಿತ್ತು.

ರಸ್ತೆ ಮೇಲೆ ಸುಮಾರು 50 ಮೀಟರ್ ವ್ಯಾಪ್ತಿಯಲ್ಲಿ ಮರ, ಮಣ್ಣು ಬಿದ್ದಿತ್ತು. ಎಕರೆಗಳಷ್ಟು ವ್ಯಾಪ್ತಿಯಲ್ಲಿ ಗುಡ್ಡ ಕುಸಿದಿತ್ತು. ಗುಡ್ಡ ಕುಸಿದ ಹಿನ್ನೆಲೆ ಕುಮಟಾ-ಸಿದ್ದಾಪುರ ರಸ್ತೆ ಎರಡು ದಿನ ಬಂದ್ ಮಾಡಲಾಗಿತ್ತು. ಸಿಬ್ಬಂದಿ ರಸ್ತೆ ಮೇಲೆ ಬಿದ್ದಿದ್ದ ಮರ, ಮಣ್ಣು ತೆರವುಗೊಳಿಸಿದ್ದು ಇದೀಗ ರಸ್ತೆ ಸಂಚಾರಕ್ಕೆ ಮುಕ್ತಗೊಂಡಿದೆ. ಕುಮಟಾ-ಸಿದ್ದಾಪುರ ನಡುವಿನ ಸಂಚಾರ ಪುನರಾರಂಭವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!