ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲುಗಿನ ಹಿರಿಯ ನಟ ವೆಂಕಟೇಶ್ ಬಗ್ಗೆ ವಿಸೇಷ ಪರಿಚಯ ಬೇಕಿಲ್ಲ. ಕೌಟುಂಬಿಕ ಕಥೆಯ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವ ವೆಂಕಿ ಮಾಮಾ ತಮ್ಮದೇ ಸೂಪರ್ ಹಿಟ್ ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಇತ್ತೀಚೆಗಷ್ಟೇ ವೆಂಕಟೇಶ್ ಜಿಗರ್ತಾಂಡ ಡಬಲ್ ಎಕ್ಸ್ ಸಿನಿಮಾ ಪ್ರೀ ರಿಲೀಸ್ ಈವೆಂಟ್ನಲ್ಲಿ ಭಾಗವಹಿಸಿದ್ದರು. ಕಾರ್ತಿಕ್ ಸುಬ್ಬರಾಜು ನಿರ್ದೇಶನದ ಮತ್ತು ರಾಘವ ಲಾರೆನ್ಸ್ ಮತ್ತು ಎಸ್ಜೆ ಸೂರ್ಯ ಮುಖ್ಯ ನಾಯಕರಾಗಿ ನಟಿಸಿದ್ದಾರೆ. ಹಿಂದಿನ ಚಲನಚಿತ್ರ ಜಿಗರ್ತಂಡದ ಮುಂದುವರಿದ ಭಾಗವಾಗಿದ್ದು, ದೀಪಾವಳಿ ಉಡುಗೊರೆಯಾಗಿ ನವೆಂಬರ್ 10 ರಂದು ಬಿಡುಗಡೆಯಾಗಲಿದೆ.
ಈ ಸಂದರ್ಭದಲ್ಲಿ ಸಿನಿಮಾದ ಪ್ರಚಾರಕ್ಕಾಗಿ ಪ್ರೀ ರಿಲೀಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ವೆಂಕಟೇಶ್ ಅತಿಥಿಯಾಗಿ ಬಂದಿದ್ದರು. ಈ ಸಮಾರಂಭದಲ್ಲಿ ರಾಘವ ಲಾರೆನ್ಸ್ ಮತ್ತು ವೆಂಕಟೇಶ್ ಒಟ್ಟಿಗೆ ʻಪೆಳ್ಳಿ ಕಲ ವಚ್ಚೇಸಿಂದೇ ಬಲಾʼ ಹಾಡಿಗೆ ಹೆಜ್ಜೆ ಹಾಕಿದರು. ಈ ಹಾಡಿಗೆ ಲಾರೆನ್ಸ್ ಕೊರಿಯಾಗ್ರಫಿ ಮಾಡಿದ್ದು, ಇಬ್ಬರೂ ಈ ಹಾಡಿಗೆ ಹೆಜ್ಜೆ ಹಾಕಿ ಅಭಿಮಾನಿಗಳನ್ನು ರಂಜಿಸಿದರು.