ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೇಳಿಕೇಳಿ ಮಾವಿನ ಹಣ್ಣಿನ ಸೀಸನ್ ಇದು. ಮಾರುಕಟ್ಟೆಯಲ್ಲಂತೂ ತರೇಹವಾರಿ ಹಣ್ಣುಗಳು ಮಾರಾಟವಾಗುತ್ತಿವೆ. ಜಮೀನಿನಲ್ಲಿರುವ ಮಾವಿನ ಮರದಲ್ಲೂ ಮಾವಿನ ಫಸಲು ಚೆನ್ನಾಗಿಯೇ ಬಂದಿರುತ್ತದೆ. ಒಟ್ಟಿನಲ್ಲಿ ಬೇಸಗೆಯೆಂದರೆ ಅದು ಮಾವಿನ ಸೀಸನ್!. ರುಚಿ ರುಚಿಯಾದ ಮಾವಿನ ಹಣ್ಣಿನಿಂದ ಐಸ್ ಕ್ರೀಂ ತಯಾರಿಸಿದರೆ ಹೇಗಿರುತ್ತೆ ಅಲ್ವಾ!. ಹಾಗಾದ್ರೆ ಮಾವಿನ ಹಣ್ಣಿನ ಐಸ್ ಕ್ರೀಂ ಟ್ರೈ ಮಾಡೋಣ. ತೋಟಲ್ಲಿರುವ ಮಾವಿನ ಹಣ್ಣನ್ನೇ ಬಳಸಿ ನಾವು ಮನೆಯಲ್ಲಿಯೇ ರುಚಿ ರುಚಿಯಾದ ಐಸ್ ಕ್ರೀಂ ತಯಾರಿಸಬಹುದು. ಅದು ಹೇಗೆ ನೋಡೋಣ.
ಬೇಕಾಗುವ ಸಾಮಾಗ್ರಿ: ಚೆನ್ನಾಗಿ ಹಣ್ಣಾದ ಮಾವು, ಹಾಲಿನ ಹುಡಿ, ಸಕ್ಕರೆ ಹುಡಿ, ಐಸ್ ಕ್ಯೂಬ್, ಹಾಲು.
ಮಾಡುವ ವಿಧಾನ:
ಮಾವಿನ ಹಣ್ಣಿನ ಸಿಪ್ಪೆ ತೆಗೆದು ಸಣ್ಣದಾಗಿ ಕತ್ತರಿಸಿಟ್ಟುಕೊಳ್ಳಿ. ಹಾಲಿನ ಪುಡಿ, ಸಕ್ಕರೆ ಪುಡಿ, ಐಸ್ಕ್ಯೂಬ್ ಹಾಗೂ ಹಾಲನ್ನು ಸರಿಯಾಗಿ ಮಿಶ್ರಣಮಾಡಿಕೊಳ್ಳಿ. ಸ್ವಲ್ಪ ಕತ್ತರಿಸಿಟ್ಟ ಮಾವಿನ ಹಣ್ಣನ್ನು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಟ್ಟುಕೊಳ್ಳಿ. ಇದನ್ನು ಅಗಲಬಾಯಿಯ ಗಾಜಿನ ಜಾಡಿಯಲ್ಲಿ ಹಾಕಿ ಫ್ರೀಜರ್ನಲ್ಲಿ ಇರಿಸಿ. ಗಟ್ಟಿಯಾದ ಬಳಿಕ ಸ್ಕೂಪ್ ಬಳಸಿ ಬೌಲ್ಗೆ ಐಸ್ ಕ್ರೀಂ ಹಾಕಿ. ಮೇಲ್ಭಾಗದಲ್ಲಿ ಕತ್ತರಿಸಿದ ಮಾವಿನ ಹಣ್ಣಿನ ತುಂಡುಗಳನ್ನು ಅಲಂಕರಿಸಿ, ಸರ್ವ್ ಮಾಡಿ. ರುಚಿ ರುಚಿಯಾದ ನೈಸರ್ಗಿಕ ಐಸ್ ಕ್ರೀಂ ರೆಡಿ