ಕನ್ನಡ ಹಿರಿಯ ನಟ, ಚಿತ್ರ ಸಾಹಿತಿ ಸಿ.ವಿ ಶಿವಶಂಕರ್ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್ ವುಡ್ ಖ್ಯಾತ ಗೀತರಚನೆಕಾರ, ನಿರ್ಮಾಪಕ ಮತ್ತು ಹಿರಿಯ ನಿರ್ದೇಶಕ ಸಿ. ವಿ .ಶಿವಶಂಕರ್ (90) ಅವರು ಇಂದು ನಿಧನರಾಗಿದ್ದಾರೆ.

ಡಾ. ರಾಜ್ ರಂತಹ ನಟರ ಸಹಯೋಗದಲ್ಲಿ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು, ತದನಂತರ, ಹಲವಾರು ಚಿತ್ರಗಳಲ್ಲಿ ಅಭಿನಯಿಸುತ್ತಾ, ಸಂಭಾಷಣೆ-ಗೀತಸಾಹಿತ್ಯದತ್ತ ಒಲವು ಬೆಳೆಸಿಕೊಂಡರು.

ನಿರ್ದೇಶಕ, ನಿರ್ಮಾಪಕ , ಗೀತರಚನೆಕಾರ ಮತ್ತು ಸಂಭಾಷಣೆ ಬರಹಗಾರರು ಇವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡಿದ್ದಾರೆ.ಸ್ಕೂಲ್ ಮಾಸ್ಟರ್’, ‘ಕೃಷ್ಣ ಗಾರುಡಿ’, ‘ರತ್ಮಮಂಜರಿ’, ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.

ಸಿವಿ ಶಿವಶಂಕರ್ ಅವರು ಕನ್ನಡ ಚಲನಚಿತ್ರ ರತ್ನ ಮಂಜರಿಯಿಂದ ನಟ ಮತ್ತು ಸಹಾಯಕ ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು . ಆದರೆ ಸಿವಿ ಶಿವಶಂಕರ್ ಹೃದಯಾಘಾತದಿಂದ ನಿಧನರಾಗಿದ್ದು, ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ಮನೆ ಕಟ್ಟಿ ನೋಡು, ಪದವೀಧರ, ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ವಿ ಶಿವಶಂಕರ್ ರಿಗೆ 1991ರಲ್ಲಿ ಕರ್ನಾಟಕ ರಾಜ್ಯಪ್ರಶಸ್ತಿ, 1994 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಸಿಂಗನಲ್ಲೂರು ಪುಟ್ಟಸ್ವಾಮಯ್ಯ ರಾಜಕುಮಾರ್ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿಗಳು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!