ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ಪಂಜಾಬಿ ಗಾಯಕ ಸುರಿಂದರ್ ಶಿಂದಾ ಅವರು ಇಂದು ವಿಧಿವಶರಾದರು. ಶಿಂದಾ ಅವರಿಗೆ 64 ವರ್ಷ ವಯಸ್ಸಾಗಿತ್ತು.
ಅನಾರೋಗ್ಯದ ಕಾರಣ 20 ದಿನಗಳ ಕಾಲ ಲುಧಿಯಾನದ ಡಿಎಂಸಿ ಆಸ್ಪತ್ರೆಯಲ್ಲಿದ್ದ ಸುರಿಂದರ್ ಶಿಂದಾ, ಇಂದು ಬೆಳಗ್ಗೆ 7.30ಕ್ಕೆ ನಿಧನರಾದರು.
ಪ್ರಸಿದ್ಧ ಪಂಜಾಬಿ ಹಾಡುಗಳನ್ನು ಹಾಡಿರುವ ಸುರಿಂದರ್ ಶಿಂದಾ ಅವರ ಸಾವಿನ ಸುದ್ದಿ ಕೇಳಿ ಇಡೀ ಪಂಜಾಬಿ ಚಿತ್ರರಂಗಕ್ಕೆ ಆಘಾತವಾಗಿದೆ.