ಹೊಸದಿಗಂತ ಡಿಜಿಟಲ್ ಡೆಸ್ಕ್:
ಶೈವ ಹಾಗೂ ವೈಷ್ಣವ ಪಂಥಗಳ ಚಿಹ್ನೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಸಚಿವ ಕೆ.ಪೊನ್ಮುಡಿಯವರನ್ನು ತಕ್ಷಣವೇ ವಜಾಗೊಳಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ (VHP ) ಒತ್ತಾಯಿಸಿದೆ.
ಹಿಂದು ಚಿಹ್ನೆಗಳ ಬಗ್ಗೆ ಸಚಿವರು ಅಸಭ್ಯ ಪದಗಳನ್ನು ಬಳಸಿದ್ದಾರೆ, ಇದನ್ನು ಯಾವುದೇ ನಾಗರಿಕ ಸಮಾಜವು ಸಹಿಸುವುದಿಲ್ಲ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಅವರು ಬೋಧಿಸುವ ಜಾತ್ಯತೀತತೆಗೆ ಬದ್ಧರಾಗಿದ್ದರೆ, ಪೊನ್ಮುಡಿ ಅವರನ್ನು ಸಚಿವ ಸ್ಥಾನದಿಂದ ತಕ್ಷಣ ತೆಗೆದುಹಾಕಬೇಕು ಎಂದು ಆಗ್ರಹಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ವಿಎಚ್‌ಪಿಯ ತಮಿಳುನಾಡು ರಾಜ್ಯ ಅಧ್ಯಕ್ಷ ಅಂಡಾಳ್ ಪಿ. ಚೊಕ್ಕಲಿಂಗಂ ತಮಿಳುನಾಡು ವಿಎಚ್‌ಪಿ ಘಟಕ ಈ ವಿಷಯದ ಬಗ್ಗೆ ರಾಷ್ಟ್ರದಾದ್ಯಂತ ಪ್ರತಿಭಟಿಸಲಿದೆ. ಡಿಎಂಕೆಯ ಹುಸಿ ಜಾತ್ಯತೀತತೆಯನ್ನು ಮತ್ತು ಡಿಎಂಕೆ ಸರ್ಕಾರದ ಮುಂದುವರಿಕೆ ಹಿಂದುಗಳಿಗೆ ಹೇಗೆ ಅವಮಾನವಾಗಿದೆ ಎಂಬುದನ್ನು ಜನರಿಗೆ ಹೇಳಲಿದ್ದೇವೆ ಎಂದು ಹೇಳಿದ್ದಾರೆ.