ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾವುದೇ ಬ್ಯಾಕ್ಗ್ರೌಂಡ್ ಇಲ್ಲದೆ, ಪರಿಚಯಸ್ಥ ವ್ಯಕ್ತಿಗಳಿಲ್ಲದೆ ಬಾಲಿವುಡ್ನಲ್ಲಿ ನೆಲೆಯೂರಿದ ವಿಕ್ಕಿ ಕೌಶಲ್ ಇದೀಗ ಇಂಜಿನಿಯರಿಂಗ್ ಬಿಟ್ಟು ಸಿನಿಮಾ ಕಡೆಗೆ ವಾಲಿದ್ಯಾಕೆ ಎಂದು ಹೇಳಿಕೊಂಡಿದ್ದಾರೆ.
ಶೆಹ್ನಾಜ್ ಗಿಲ್ ಜೊತೆಗಿನ ಶೋ ಒಂದರಲ್ಲಿ ಇಂಜಿನಯರಿಂಗ್, ಒಳ್ಳೆ ಕೆಲಸ, ಒಳ್ಳೆ ಸಂಬಳ ಬೇಡ ಎಂದು ಸಿನಿಮಾ ಕಡೆ ಬಂದಿದ್ಯಾಕೆ ಎಂದು ಶೆಹ್ನಾಜ್ ಪ್ರಶ್ನೆ ಇಟ್ಟಿದ್ದಾರೆ.
ಚಿಕ್ಕವರಿದ್ದಾಗಿನಿಂದಲೂ ನಾನು ಸನ್ನಿ ಸ್ಟೇಜ್ ಪರ್ಫಾಮೆನ್ಸ್ ಕೊಡುತ್ತಾ ಬಂದಿದ್ದೇವೆ. ಇಂಜಿನಿಯರಿಂಗ್ ಮಾಡುವವರೆಗೂ ನನಗೆ ಸಿನಿಮಾಗೆ ಹೋಗಬೇಕು ಅನ್ನೋ ಆಲೋಚನೆ ಇರಲಿಲ್ಲ. ಎಂಬಿಎ ಮಾಡಬೇಕು ಎಂದುಕೊಂಡಿದ್ದೆ. ಹೀಗೆ ಒಮ್ಮೆ ಕಾಲೇಜಿನಲ್ಲಿ ಎಲ್ಲ ವಿದ್ಯಾರ್ಥಿಗಳನ್ನು ದೊಡ್ಡ ಕಂಪನಿಯೊಂದಕ್ಕೆ ಕರೆದುಕೊಂಡು ಹೋಗಿದ್ದರು. ಅದರಲ್ಲಿ ಎಲ್ಲರೂ ಕಂಪ್ಯೂಟರ್ ಒಳಗೆ ಕಳೆದುಹೋಗಿದ್ದರು. ಅವರನ್ನು ತೋರಿಸಿ, ನೀವು ಇವರಂತೆ ಮುಂದೆ ಕೆಲಸ ಮಾಡುತ್ತೀರಿ ಎಂದು ಗುರುಗಳು ಹೇಳಿದ್ದರು.
ಅದೇ ದಿನ ನನಗೆ ಗೊತ್ತಾಯ್ತು ಆ ಕಂಪ್ಯೂಟರ್ಗಳನ್ನು ನೋಡಿ ನಾನು ಭಯ ಬಿದ್ದಿದ್ದೆ. ಈ ರೀತಿ ಕುಳಿತು ಕೆಲಸ ಮಾಡಿ, ತಿಂಗಳ ಕೊನೆಯಲ್ಲಿ ಸಂಬಳ ಎಣಿಸುವ ಕೆಲಸ ಮಾಡಲು ನನಗೆ ಸಾಧ್ಯವಿಲ್ಲ ಎಂದು ನಿರ್ಧರಿಸಿದ್ದೆ. ಅಷ್ಟೊತ್ತಿಗಾಗಲೇ ಕ್ಯಾಂಪಸ್ ಸೆಲೆಕ್ಷನ್ನಲ್ಲಿ ಕೆಲಸ ಕೂಡ ಸಿಕ್ಕಿತ್ತು. ಅದನ್ನು ಬಿಟ್ಟು ಸಿನಿಮಾದಲ್ಲಿ ಕೆಲಸ ಮಾಡಲು ಬಂದೆ. 20ರ ಹರೆಯದಲ್ಲಿ ನಾನು ತೆಗೆದುಕೊಳ್ಳುವ ಯಾವುದೇ ನಿರ್ಧಾರ ನನ್ನ 40 ರಲ್ಲಿ ನನ್ನನ್ನು ಪಶ್ಚಾತ್ತಾಪಕ್ಕೆ ತಳ್ಳಬಾರದು ಎಂದು ವಿಕ್ಕಿ ಹೇಳಿಕೊಂಡಿದ್ದಾರೆ.