ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಡಾನೆ ದಾಳಿಯಿಂದ ಕೇರಳದಲ್ಲಿ ವ್ಯಕ್ತಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಘೋಷಿಸಿದ್ದ 15 ಲಕ್ಷ ರೂ. ಪರಿಹಾರವನ್ನು ಕೇರಳ ಸಂತ್ರಸ್ತ ಕುಟುಂಬ ಪಡೆಯಲು ತಿರಸ್ಕರಿಸಿದೆ.
ಈ ಕುರಿತು ಮಾಹಿತಿ ನೀಡಿದ ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ , ಮಾನವೀಯತೆ ದೃಷ್ಟಿಯಿಂದ ನಾವು ಪರಿಹಾರ ಘೋಷಿಸಿದ್ದೆವು. ಆದರೆ ಸಂತ್ರಸ್ತ ಕುಟುಂಬವು ಪರಿಹಾರ ಬೇಡವೆಂದು ತಿರಸ್ಕರಿಸಿದೆ ಎಂದು ಖಂಡ್ರೆ ಮಾಹಿತಿ ನೀಡಿದ್ದಾರೆ.