ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯವಾಗಿ ಏನಾದರೂ ಸಾಧನೆ ಮಾಡಿ ಬಂದವರಿಗೆ ಹಣೆಗೆ ತಿಲಕ ಇಟ್ಟು, ಅಕ್ಷತೆ ಹಾಕಿ ಮನೆಯೊಳಗೆ ಕರೆದುಕೊಳ್ಳೋದು ರೂಢಿ.
ಇನ್ನು ಆಸ್ಪತ್ರೆಯಿಂದ ಬಂದವರಿಗೆ, ಶುಭಸಮಯದಲ್ಲಿ ಈ ರೀತಿ ಸ್ವಾಗತ ಸಿಗುತ್ತದೆ. ಆದರೆ ದೆಹಲಿಯಲ್ಲಿ ಝೊಮ್ಯಾಟೊ ಡೆಲಿವರಿ ಬಾಯ್‌ಗೆ ಈ ರೀತಿ ಸ್ವಾಗತ ಸಿಕ್ಕಿದೆ. ದೆಹಲಿ ಟ್ರಾಫಿಕ್‌ನಲ್ಲಿ ಆಹಾರ ಆರ್ಡರ್ ಮಾಡಿದ ನಾಲ್ಕು ಗಂಟೆ ಬಳಿಕ ಊಟ ನೀಡಿದ ಡೆಲಿವರಿ ಬಾಯ್‌ಗೆ ಗ್ರಾಹಕ ಹಣೆಗೆ ಕುಂಕುಮ ಇಟ್ಟು ಸ್ವಾಗತ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ಸಂಜೀವ್ ಕುಮಾರ್ ಈ ವಿಡಿಯೋ ಅಪ್‌ಲೋಡ್ ಮಾಡಿದ್ದಾರೆ. ಝೊಮ್ಯಾಟೊ ಡೆಲಿವರಿ ಬಾಯ್‌ನ ಹೆಲ್ಮೆಟ್ ತೆಗೆಸಿ ಕುಂಕುಮ ಇಟ್ಟಿದ್ದು, ಅವರಿಗೂ ಇದು ತಮಾಷೆಗೆ ವಿಡಿಯೋ ಮಾಡಿದ್ದಾರೆ ಎಂದು ತಿಳಿದಿದೆ.
ತಿನ್ನೋಕೆ ಆರ್ಡರ್ ಮಾಡಿದ ನಾಲ್ಕು ಗಂಟೆ ನಂತರ ಆಹಾರ ಬಂದಾಗ ಅದ್ಧೂರಿ ಸ್ವಾಗತ ಮಾಡದೇ ಇನ್ನೇನು ಮಾಡೋದು ಅಂತಿದ್ದಾರೆ ನೆಟ್ಟಿಗರು.
https://www.instagram.com/reel/CjVf8SUjRvq/?utm_source=ig_web_copy_link