ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುವಕನೊಬ್ಬ ಹಸುವನ್ನು ಬೈಕ್ ಮೇಲೆ ಕೂರಿಸಿಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.
ಬೆಕ್ಕು, ನಾಯಿ ಮುಂತಾದ ಸಾಕುಪ್ರಾಣಿಗಳನ್ನು ಕಾರು ಮತ್ತು ಸೈಕಲ್‌ಗಳಲ್ಲಿ ಕರೆದುಕೊಂಡು ಹೋಗುವುದು ಕಾಮನ್. ಆದರೆ ಇದೀಗ ಯುವಕನೊಬ್ಬ ಹಸುವನ್ನು ಮುಂದೆ ಕೂರಿಸಿಕೊಂಡು ಬೈಕ್ ಓಡಿಸಿದ್ದನ್ನು ಕಂಡು ಜನ ಬೆಚ್ಚಿಬಿದ್ದಿದ್ದಾರೆ. @nareshbahrain ಎಂಬ ಟ್ವಿಟ್ಟರ್ ಬಳಕೆದಾರ ಶೇರ್ ಮಾಡಿರುವ ವಿಡಿಯೋವೊಂದು ನೆಟ್ಟಿಗರನ್ನು ಆಶ್ಚರ್ಯಗೊಳಿಸಿದೆ.
ವಿಡಿಯೋದಲ್ಲಿ ಹಸು ತುಂಬಾ ಶಾಂತವಾಗಿ ಬೈಕ್ ಮೇಲೆ ಕುಳಿತಿತ್ತು. ಯುವಕ ಅತ್ಯಂತ ಆತ್ಮವಿಶ್ವಾಸದಿಂದ ಬೈಕ್ ಚಲಾಯಿಸುತ್ತಿದ್ದ. ಹಸುವಿನ ಮುಖದಲ್ಲೂ ಯಾವುದೇ ಆತಂಕವಾಗಲೀ ಭಯವಾಗಲೀ ಇರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗಿರುವ ಈ ವಿಡಿಯೋ ಇದೀಗ ಭಾರೀ ವೀಕ್ಷಣೆಗೆ ಒಳಗಾಗುತ್ತಿದೆ. ಆದರೆ ಹಸು ಬೈಕ್ ಮೇಲೆ ಕೂತಿದ್ದು ಹೇಗೆ ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
https://twitter.com/i/status/1722875690817916974