ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮೆಟ್ರೋದಲ್ಲಿ ಫಿಟ್ನೆಸ್ ತರಬೇತುಗಾರ್ತಿ ಜಗಜೋತ್ ಕೌರ್ ಸ್ಟಂಟ್ ಮಾಡುತ್ತಿರುವುದು ವೈರಲ್ ಆಗಿದೆ. ಮೆಟ್ರೋದಲ್ಲಿ ವಿಡಿಯೋ, ಡ್ಯಾನ್ಸ್ ನಿಷೇಧದ ಬಗ್ಗೆ ಅಧಿಕಾರಿಗಳು ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಇಂತಹ ಘಟನೆಗಳು ಪುನರಾವರ್ತನೆಯಾಗುತ್ತಿರುವುದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೆಟ್ರೋ ಅಧಿಕಾರಿಗಳು ವಿಧಿಸಿರುವ ನಿರ್ಬಂಧಗಳು ಪ್ರಯಾಣಿಕರ ಕಿವಿಗೆ ಬೀಳುತ್ತಿಲ್ಲ. ಡಾನ್ಸ್, ರೀಲ್ಸ್, ರೊಮ್ಯಾನ್ಸ್ ಎಲ್ಲವೂ ಆಯ್ತು, ಇದೀಗ ಫಿಟ್ನೆಸ್ ಕೋಚ್ ಸ್ಟಂಟ್ಸ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ (jagjot_k143) ಮೆಟ್ರೋ ಪಿವೋಟೆಡ್ ಗ್ರಾಬ್ ಹ್ಯಾಂಡಲ್ಸ್ ಬಳಸಿ ವ್ಯಾಯಾಮ ಮಾಡುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (DMRC) ಮೆಟ್ರೋ ಆವರಣದೊಳಗೆ ವೀಡಿಯೊಗಳನ್ನು ಮಾಡುವುದರ ವಿರುದ್ಧ ಪದೇ ಪದೇ ಎಚ್ಚರಿಕೆಗಳನ್ನು ನೀಡಿದರೂ ಉಪಯೋಗವಾಗುತ್ತಿಲ್ಲ. ಇತ್ತೀಚಿನ ವೀಡಿಯೊಗೆ ಅಧಿಕಾರಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡಬೇಕಿದೆ.