ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆ ಸಮಾರಂಭದಲ್ಲಿ ಸಂಗೀತ ಆಯೋಜನೆ ಇತ್ತೀಚೆಗೆ ಟ್ರೆಂಡ್ ಆಗಿದೆ. ಆದರೆ, ಕೆಲವರು ಹದ್ದು ಮೀರಿ ಮದುವೆಯಲ್ಲಿ ಡ್ಯಾನ್ಸ್ ಮಾಡಿರುವ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವು ಯುವಕರು ಎರಡು ಕೈಗಳಿಂದ ಖಾಲಿ ಪಾತ್ರೆಗಳನ್ನು ಬಡಿಯುತ್ತಾ, ಕುರ್ಚಿಗಳನ್ನು ಎತ್ತಿ ನೃತ್ಯ ಮಾಡಿದ್ದಾರೆ.
ಅಂಕಿತ್ ಎಂಬ ವ್ಯಕ್ತಿ ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅನ್ನ ಬಡಿಸುವ ಪಾತ್ರಗಳಿಡಿದು ಈ ನೃತ್ಯ ಮಾಡಿದ್ದಾರೆ. ಇದು ಅನ್ನಕ್ಕೆ ಮಾಡಿದ ಅವಮಾನ ಎಂದು ಕೆಲವರು, ಇನ್ನೂ ಕೆಲವರು ಸಮಾರಂಭದಲ್ಲಿ ಸಂಗೀತ ಇಲ್ಲದಿದ್ದರೂ ಕುಣಿತ ನಿಲ್ಲುವುದಿಲ್ಲ ಎಂದು ಹಲವರು, ಇದೆಂಧಾ ನಾನ್‌ಸೆನ್ಸ್ ಎಂದು ಕಾಮೆಂಟ್ ಮಾಡಿದ್ದಾರೆ.
Girls :- yha jyade instruments nhi baj rhe hai dance nhi karungi
Meanwhile Boys :- pic.twitter.com/JN3DbHiGdl
— Ankit $8 (@imoriginalankit) December 6, 2022