ಹೊಸ ದಿಗಂತ ವರದಿ, ಬೇಲೂರು:
ಜನ ವಸತಿ ಪಕ್ಕದಲ್ಲಿನ ವಿದ್ಯುತ್ ಟಿಸಿಯಿಂದ ತೊಂದರೆಯಾಗುತ್ತಿದ್ದು, ಚೆಸ್ಕಾಂ ಈಗಾಗಲೇ ಟಿಸಿ ಸ್ಥಳಾಂತರಕ್ಕೆ ಆದೇಶ ನೀಡಿದರೂ ಇಲ್ಲಿನ ಕೆಲವರು ಉದ್ದೇಶಪೂರ್ವಕ ಟಿಸಿ ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿದಲ್ಲದೆ, ನಾಲ್ವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಹಲ್ಲೆಗೆ ಒಳಗಾದ ನಾಲ್ವರು ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲೆಗೊಂಡಿರುವ ಘಟನೆ ನಡೆದಿದೆ.
ಹೌದು! ತಾಲ್ಲೂಕಿನ ಎಂ.ಹುಣಸೇಕೆರೆ ಗ್ರಾಮದ ನಂಜಶೆಟ್ಟಿ ಮತ್ತು ಯಶೋಧಮ್ಮ ಇವರ ವಾಸ ಮನೆಯ ಪಕ್ಕದಲ್ಲಿ ಅಂಟಿಕೊಂಡಂತೆ ವಿದ್ಯುತ್ ಟಿಸಿ ಅಳವಡಿಸಿದ್ದಾರೆ. ಇದ್ದರಿಂದ ಬೆಂಕಿಯ ಕಿಡಿಗಳು ಜಾನುವಾರಗಳು ತಿನ್ನುವ ಮೇವಿನ ಮೇಲೆ ಬಿದ್ದು ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಮನೆಯವರು ದಿನ-ನಿತ್ಯ ಆತಂಕದಲ್ಲಿ ಕಾಲ ಕಳೆಯಬೇಕಾಗಿದೆ ಎಂದು ಚೆಸ್ಕಾಂ ಇಲಾಖೆ ವಿರುದ್ದ ದೂರು ನೀಡಿದ ಹಿನ್ನಲೆಯಲ್ಲಿ ಚೆಸ್ಕಾಂ ಇಲಾಖೆ ಟಿಸಿ ಸ್ಥಳಾಂತರಕ್ಕೆ ಅವಕಾಶ ನೀಡಿದೆ. ಆದರೆ ಇಲ್ಲಿನ ಕೆಲ ನಿವಾಸಿಗಳು ಟಿಸಿ ಸ್ಥಳಾಂತರಕ್ಕೆ ಅವಕಾಶ ನೀಡುತ್ತಿಲ್ಲ, ಕೇಳಿದರೆ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆ ಒಳಗಾದ ವ್ಯಕ್ತಿಗಳು ಪತ್ರಿಕೆಯೊಂದಿಗೆ ತಮ್ಮ ಆಳಲು ಹೇಳಿಕೊಂಡರು.
ಪತ್ರಿಕೆಯೊಂದಿಗೆ ಮಾತನಾಡಿದ ಎಂ.ಹುಣಸೇಕೆರೆ ಗ್ರಾಮದ ನಂಜಶೆಟ್ಟಿ, ಯಶೋಧ, ಸಂತೋಷ್ ಮತ್ತು ಪುನೀತ್, ನಮ್ಮ ಮನೆಗೆ ಅಂಟಿಕೊಂಡ ರೀತಿಯಲ್ಲಿ ವಿದ್ಯುತ್ ಟಿಸಿ ಅಳವಡಿಸಿದ್ದಾರೆ. ಈ ಬಗ್ಗೆ ಹತ್ತಾರು ಭಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜವಾಗಿಲ್ಲ, ದಿನ-ನಿತ್ಯ ಆಂತಕದಲ್ಲಿ ಬದುಕು ಕಳೆಯಬೇಕಾದ ಹೀನ ಸ್ಥಿತಿ ಬಂದಿದೆ. ಕೇಳಿದರೆ ಉಡಾಪೆಯಿಂದ ಮಾತನಾಡುತ್ತಾರೆ. ಸದ್ಯ ಟಿಸಿಯನ್ನು ಇಲಾಖೆ ಸ್ಥಳಾಂತರಕ್ಕೆ ಮುಂದಾಗಿದೆ. ಆದರೆ ಇಲ್ಲಿನ ನಿವಾಸಿಗಳು ಸ್ಥಳಾಂತರಕ್ಕೆ ತೀವ್ರವಾಗಿ ವಿರೋದ ವ್ಯಕ್ತ ಪಡಿಸಿದ್ದಾರೆ.