CINE| ವಿಜಯ್ ಯಾವ ಸಿನಿಮಾ ಕೂಡ ಇಷ್ಟು ದುಡ್ಡು ಮಾಡಿಲ್ಲ! ಖುಷಿ ಕಮಾಯಿಗೆ ಸಮಂತಾ ಕಾರಣ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ʻಖುಷಿʼ ಶಿವ ನಿರ್ವಾಣ ನಿರ್ದೇಶನದ ಲವ್ ರೊಮ್ಯಾಂಟಿಕ್ ಎಂಟರ್ಟೈನರ್ ಸಿನಿಮಾ ಆಗಿದ್ದು, ವಿಜಯ್ ದೇವರಕೊಂಡ ಮತ್ತು ಸಮಂತಾ ನಟಿಸಿದ್ದಾರೆ. ಬಿಡುಗಡೆಗೂ ಮುನ್ನವೇ ವಿಜಯ್ ಮತ್ತು ಸಮಂತಾ ಕಾಂಬಿನೇಷನ್ ಸಿನಿಮಾ ಹಿಟ್ ಆಗಲಿದೆ ಎಂಬ ನಿರೀಕ್ಷೆ ಇತ್ತು. ಸೆಪ್ಟೆಂಬರ್ 1 ರಂದು ಗ್ರ್ಯಾಂಡ್ ಪ್ಯಾನ್-ಇಂಡಿಯಾ ರಿಲೀಸ್ ಆಗಿ, ನಿರೀಕ್ಷೆಯಂತೆಯೇ ಕಲೆಕ್ಷನ್‌ ಮಾಡಿದೆ.

ಖುಷಿ ಚಿತ್ರ ಥಿಯೇಟರ್‌ಗಳಲ್ಲಿ ಪ್ರೇಕ್ಷಕರ ಮನಗೆದ್ದು, ಡೆ ಮಿಶ್ರ ವಿಮರ್ಶೆಗಳು ಬಂದರೂ ಅನೇಕರು ಈ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನವೇ ಕಲೆಕ್ಷನ್ ಆಗುವ ನಿರೀಕ್ಷೆ ಇದೆ.

ವಿಜಯ್ ಮತ್ತು ಸಮಂತಾ ಕಾಂಬಿನೇಷನ್ ಸಿನಿಮಾಗೆ ದೊಡ್ಡ ಪ್ಲಸ್ ಆಗಿದೆ. ವಿಜಯ್ ಅವರ ವೃತ್ತಿಜೀವನದಲ್ಲಿ ಖುಷಿ ಮೊದಲ ದಿನದ ಅತಿ ಹೆಚ್ಚು ಕಲೆಕ್ಷನ್ ಮಾಡಿದೆ. ಮೊದಲ ದಿನವೇ ವಿಶ್ವಾದ್ಯಂತ 30 ಕೋಟಿ ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ. ಟಾಲಿವುಡ್ ಬಾಕ್ಸ್ ಆಫೀಸ್ ಅಂಕಿಅಂಶಗಳ ಪ್ರಕಾರ ಎರಡು ತೆಲುಗು ರಾಜ್ಯಗಳಲ್ಲಿ ಒಟ್ಟು ಸಂಗ್ರಹಗಳು ಸುಮಾರು 18 ಕೋಟಿ, ವಿದೇಶದಿಂದ 8 ಕೋಟಿ ಮತ್ತು ಉಳಿದ ಭಾಗದಿಂದ ಇನ್ನೂ ನಾಲ್ಕು ಕೋಟಿ ಎಂದು ವರದಿಯಾಗಿದೆ.

ಈ ವಾರ ದೊಡ್ಡ ಚಿತ್ರಗಳಿಲ್ಲದ ಕಾರಣ ಖುಷಿ ಸಿನಿಮಾ ಖಂಡಿತಾ 100 ಕೋಟಿ ಗಳಿಕೆ ಮಾಡಲಿದೆ ಎಂಬುದು ಚಿತ್ರತಂಡದ ಅಭಿಪ್ರಾಯ. ಈ ಸಿನಿಮಾದ ಪ್ರೀ ರಿಲೀಸ್ ಬ್ಯುಸಿನೆಸ್ 53 ಕೋಟಿಗೆ ನಡೆದಿದೆ. ಅಂದರೆ ಸಿನಿಮಾ ಬ್ರೇಕ್ ಈವ್ ಆಗಬೇಕಾದರೆ 110 ಕೋಟಿಗೂ ಹೆಚ್ಚು ಅಂದರೆ ಸುಮಾರು 55 ಕೋಟಿ ಶೇರ್ ಕಲೆಕ್ಷನ್ ಗಳಿಸಬೇಕು. ವಿಜಯ್ ಸ್ಟಾರ್ ಡಮ್ ಗೆ ಸಮಂತಾ ಸ್ಟಾರ್ ಪಟ್ಟ ಕೂಡಿ ಬಂದು ಈ ಕಲೆಕ್ಷನ್ ಗಳು ಬಂದಿವೆ ಎಂಬುದು ಸ್ಯಾಮ್ ಅಭಿಮಾನಿಗಳ ಅಭಿಪ್ರಾಯ.

Image

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!