ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದೇಶೀಯ ಏಕದಿನ ಟೂರ್ನಿ ವಿಜಯ್ ಹಜಾರೆ ಟ್ರೋಫಿ ಯಲ್ಲಿ ಇಂದು ಎರಡನೇ ಸೆಮಿೈನಲ್ ಪಂದ್ಯ ನಡೆಯಲಿದ್ದು, ಕರ್ನಾಟಕ ತಂಡ ರಾಜಸ್ಥಾನ ತಂಡವನ್ನು ಎದುರಿಸಲಿದೆ.
ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. 4 ಬಾರಿಯ ಚಾಂಪಿಯನ್ ಕರ್ನಾಟಕ 5ನೇ ಬಾರಿಗೆ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.
ಟೂರ್ನಿಯ ಲೀಗ್ ಹಂತದಲ್ಲಿ ಆರು ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಕ್ವಾರ್ಟರ್‌ೈನಲ್‌ಗೇರಿದ್ದ ಕರ್ನಾಟಕ ತಂಡ, ಹರಿಯಾಣ ಎದುರು ಮಾತ್ರ ಸೋಲು ಅನುಭವಿಸಿದೆ.
ನಿಕಿನ್ ಜೋಸ್ ಹಾಗೂ ಮನೀಷ್ ಪಾಂಡೆ ಮಧ್ಯಮ ಕ್ರಮಾಂಕದಲ್ಲಿ ಉಪಯುಕ್ತ ಆಟದ ಮೂಲಕ ತಂಡಕ್ಕೆ ನೆರವಾಗಿದ್ದಾರೆ. ವೇಗಿ ವಿ.ಕೌಶಿಕ್ ಆಡಿದ 8 ಪಂದ್ಯಗಳಲ್ಲಿ 17 ವಿಕೆಟ್ ಕಬಳಿಸಿ ಕರ್ನಾಟಕ ಪರ ಅತಿಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಎನಿದ್ದಾರೆ. ಇವರಿಗೆ ವೈಶಾಕ್ ವಿಜಯ್‌ಕುಮಾರ್, ಜೆ. ಸುಚಿತ್ ಉತ್ತಮ ಬೆಂಬಲ ಒದಗಿಸಿದ್ದಾರೆ.
ಇತ್ತ ರಾಜಸ್ಥಾನ ಡಿ ಗುಂಪಿನ 6 ಲೀಗ್ ಪಂದ್ಯ ಜಯಿಸಿ ಅಗ್ರಸ್ಥಾನದೊಂದಿಗೆ ನಾಕೌಟ್‌ಗೇರಿದೆ. ದೀಪಕ್ ಹೂಡಾ ರಾಜಸ್ಥಾನ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕೇರಳ ವಿರುದ್ಧ 200 ರನ್‌ಗಳ ಭರ್ಜರಿ ಗೆಲುವು ದಾಖಲಿಸಿರುವ ರಾಜಸ್ಥಾನ ಪರ ಮಹಿಪಾಲ್ ಲೊಮ್ರೋರ್ ಶತಕ ಸಿಡಿಸಿ ಮಿಂಚಿದ್ದರು.
ಫೈನಲ್‌ಗೇರಿದ ಹರಿಯಾಣ:
ಅಜೇಯ ಓಟ ಮುಂದುವರಿಸಿದ ಹರಿಯಾಣ ತಂಡ ವಿಜಯ್ ಹಜಾರೆ ಟ್ರೋಫಿಯಲ್ಲಿ ಫೈನಲ್ ಪ್ರವೇಶಿಸಿದೆ. ಬುಧವಾರ ನಡೆದ ಮೊದಲ ಸೆಮಿೈನಲ್‌ನಲ್ಲಿ ಹಿಮಾಂಶು ರಾಣಾ (116*ರನ್, 118 ಎಸೆತ, 11 ಬೌಂಡರಿ, 2 ಸಿಕ್ಸರ್) ಅಜೇಯ ಶತಕದ ಬಲದಿಂದ ಐದು ಬಾರಿಯ ಚಾಂಪಿಯನ್ ತಮಿಳುನಾಡು ಎದುರು 63 ರನ್‌ಗಳಿಂದ ಗೆಲುವು ದಾಖಲಿಸಿತು.
ಡಿಸೆಂಬರ್ 16, ಶನಿವಾರದಂದು ರಾಜ್‌ಕೋಟ್‌ನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಎರಡನೇ ಸೆಮಿಫೈನಲ್ ಗೆದ್ದ ತಂಡದ ಜೊತೆ ಹರಿಯಾಣ ಮುಖಾಮುಖಿಯಾಗಲಿದೆ.