ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟ್ರೋಫಿಯ ಸೆಮಿಫೈನಲ್ ನಲ್ಲಿ ದೀಪಕ್ ಹೂಡಾ ಅವರ ಅದ್ಭುತ ಶತಕದ ನೆರವಿನಿಂದ ರಾಜಸ್ಥಾನವು ಕರ್ನಾಟಕವನ್ನು ಆರು ವಿಕೆಟ್ಗಳಿಂದ ಸೋಲಿಸಿ ಫೈನಲ್ಗೆ ಪ್ರವೇಶ ಪಡೆದುಕೊಂಡಿದೆ.
128 ಎಸೆತಗಳಲ್ಲಿ ಹೂಡಾ ಅವರ ಇನ್ನಿಂಗ್ಸ್ನಲ್ಲಿ 19 ಬೌಂಡರಿ ಹಾಗೂ ಐದು ಸಿಕ್ಸರ್ಗಳನ್ನು ಸಿಡಿಸಿ 180 ರನ್ ಕಲೆ ಹಾಕಿದರು. ಕರಣ್ ಲಂಬಾ ಔಟಾಗದೇ 73 ರನ್ ಗಳಿಸಿದ್ದರಿಂದ ನಾಲ್ಕನೇ ವಿಕೆಟ್ಗೆ 255 ರನ್ಗಳ ಜೊತೆಯಾಟ ಆಡಿದರು.
40ನೇ ಓವರ್ನ ಅಂತ್ಯಕ್ಕೆ ರಾಜಸ್ಥಾನ 3 ವಿಕೆಟ್ಗೆ 260 ರನ್ ಗಳಿಸಿತ್ತು. ಮತ್ತು ಕೊನೆಯ 10 ಓವರ್ಗಳಲ್ಲಿ ಕೇವಲ 17 ರನ್ಗಳ ಅಗತ್ಯವಿದ್ದ ಕಾರಣ ಅವರ ಗೆಲುವು ಖಚಿತವಾಗಿತ್ತು. ಪಂದ್ಯ ಜಯ ಗಳಿಸಲು ಕೇವಲ ಐದು ರನ್ಗಳ ಬೇಕಿದ್ದಾಗ ಹೂಡಾ ಔಟಾದರು.
ಇನ್ನೂ ಕರ್ನಾಟಕದ ಪರ ವಾಸುಕಿ ಕೌಶಿಕ್, ವಿಜಯ್ಕುಮಾರ್ ವೈಶಾಕ್ ಮತ್ತು ಮನೋಜ್ ಭಾಂಡಗೆ ತಲಾ ಒಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಅಭಿನವ್ ಮನೋಹರ್ ಅವರ 91 ರನ್ ಮತ್ತು ಮನೋಜ್ ಅವರ 63 ರನ್ಗಳ ನೆರವಿನಿಂದ ಕರ್ನಾಟಕ 8 ವಿಕೆಟ್ಗೆ 282 ರನ್ ಗಳಿಸಿತ್ತು. ರಾಜಸ್ಥಾನ ಪರ ಅನಿಕೇತ್ ಚೌಧರಿ ಮತ್ತು ಕುಕ್ನಾ ಅಜಯ್ ಸಿಂಗ್ ತಲಾ ಎರಡು ವಿಕೆಟ್ ಪಡೆದರು.
ಫೈನಲ್ನಲ್ಲಿ ರಾಜಸ್ಥಾನ- ಹರಿಯಾಣ ಮುಖಾಮುಖಿ:
ನಾಳೆ (ಶನಿವಾರ) ನಡೆಯಲಿರುವ ಫೈನಲ್ನಲ್ಲಿ ಹರಿಯಾಣ ವಿರುದ್ಧ ರಾಜಸ್ಥಾನ ಅಖಾಡಕ್ಕೆ ಇಳಿಯಲಿದೆ. ಎರಡು ಹಿಂದೆ ನಡೆದ ಸಮಿಫೈನಲ್ ಪಂದ್ಯದಲ್ಲಿ ಹರಿಯಾಣವು ಐದು ಬಾರಿ ಚಾಂಪಿಯನ್ ತಮಿಳುನಾಡನ್ನು 63 ರನ್ಗಳಿಂದ ಮಣಿಸುವ ಮೂಲಕ ಮೊದಲ ಬಾರಿಗೆ ಪಂದ್ಯಾವಳಿಯ ಫೈನಲ್ಗೆ ಪ್ರವೇಶಿಸಿತ್ತು.