January14, 2026
Wednesday, January 14, 2026
spot_img

ವಿಜಯ್ ಹಜಾರೆ ಟ್ರೋಫಿ | 16 ವರ್ಷಗಳ ನಂತರ ವಿರಾಟ್‌ ಕೊಹ್ಲಿ ಸೆಂಚುರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಸತತ ಎರಡು ಶತಕಗಳನ್ನು ಸಿಡಿಸಿ ಅಬ್ಬರಿಸಿದ್ದ ವಿರಾಟ್‌ ಕೊಹ್ಲಿ, ಇದೀಗ ದೇಶಿ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲೂ ತಮ್ಮ ಶತಕಗಳ ಓಟವನ್ನು ಮುಂದುವರೆಸಿದ್ದಾರೆ.

ಬರೋಬ್ಬರಿ 15 ವರ್ಷಗಳ ಬಳಿಕ ಈ ಟೂರ್ನಿಯಲ್ಲಿ ಡೆಲ್ಲಿ ಪರ ಆಡುತ್ತಿರುವ ವಿರಾಟ್, ಆಂಧ್ರಪ್ರದೇಶ ವಿರುದ್ಧದ ಪಂದ್ಯದಲ್ಲಿ ಕೇವಲ 83 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದ್ದಾರೆ. ಅಲ್ಲದೆ 16 ವರ್ಷಗಳ ನಂತರ ವಿಜಯ್ ಹಜಾರೆ ಟ್ರೋಫಿಯಲ್ಲಿ ಕೊಹ್ಲಿ ಬ್ಯಾಟ್ ಶತಕದ ಇನ್ನಿಂಗ್ಸ್ ಆಡಿದೆ.

ವಿರಾಟ್ ಕೊಹ್ಲಿ ಕೊನೆಯ ಬಾರಿಗೆ 2009 ರಲ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಶತಕ ಬಾರಿಸಿದ್ದರು. ಹರಿಯಾಣ ವಿರುದ್ಧ ನಡೆದಿದ್ದ ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ 124 ರನ್​ಗಳ ಇನ್ನಿಂಗ್ಸ್ ಆಡಿದ್ದರು.

ಮಾತ್ರವಲ್ಲದೆ ಆ ಆವೃತ್ತಿಯಲ್ಲಿ ರನ್​ಗಳ ಮಳೆ ಹರಿಸಿದ್ದ ವಿರಾಟ್ ಕೊಹ್ಲಿ ನಾಲ್ಕು ಶತಕಗಳು ಸೇರಿದಂತೆ 534 ರನ್ ಕಲೆಹಾಕಿದ್ದರು. ಈಗ, ಮತ್ತೊಮ್ಮೆ ದೇಶಿ ಅಂಗಳದಲ್ಲಿ ಅಬ್ಬರಿಸಿರುವ ವಿರಾಟ್, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನ ತಮ್ಮ ಫಾರ್ಮ್​ ಮುಂದುವರೆಸಿರುವುದು ಟೀಂ ಇಂಡಿಯಾಗೆ ಆನೆಬಲ ತಂದಿದೆ.

Most Read

error: Content is protected !!