CINE | ವಿಜಯ್ ವರ್ಮಾಗೆ ಈಗಾಗಲೇ ಮದುವೆ ಆಗಿದೆ, ಆದ್ರೆ ಪತ್ನಿ ತಮನ್ನಾ ಅಲ್ಲ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ವಿಜಯ್ ವರ್ಮಾ ತಮನ್ನಾ ಜೊತೆ ಡೇಟಿಂಗ್ ನಡೆಸುತ್ತಿದ್ದು, ಈ ವಿಷಯದಲ್ಲೇ ಸಿಕ್ಕಾಪಟ್ಟೆ ಲೈಟ್‌ಗೆ ಬಂದಿದ್ದಾರೆ. ಅದ್ಭುತ ಕಲಾವಿದ ಆದರೂ ವಿಜಯ್‌ಗೆ ಸಾಕಷ್ಟು ಅವಕಾಶಗಳು ಬಂದಿಲ್ಲ.

ಆದರೆ ವಿಜಯ್ ವರ್ಮಾಗೆ ದೊಡ್ಡ ಬ್ರೇಕ್ ನೀಡಿದ್ದು ಆಲಿಯಾ ಭಟ್ ಜೊತೆಗಿನ ಡಾರ್ಲಿಂಗ್ಸ್. ಈ ಸಿನಿಮಾದಲ್ಲಿ ವಿಜಯ್ ನಟನೆ ಅದ್ಭುತವಾಗಿದೆ ಹಾಗೇ ಆಲಿಯಾ ಹಾಗೂ ವಿಜಯ್ ಕೆಮಿಸ್ಟ್ರಿ ಕೂಡ ಚೆನ್ನಾಗಿಯೇ ಕೆಲಸ ಮಾಡಿದೆ.

ವಿಜಯ್ ಮನೆಯಲ್ಲಿ ಆಲಿಯಾ ಹಾಗೂ ವಿಜಯ್‌ರ ಮದುವೆ ಫೋಟೊ ಒಂದನ್ನು ನೇತುಹಾಕಲಾಗಿದೆ, ಸೆಟ್‌ನಿಂದ ಈ ಫೋಟೊವನ್ನು ವಿಜಯ್ ನೆನಪಿಗಾಗಿ ತಂದಿದ್ದರಂತೆ, ಈ ಫೋಟೊವನ್ನು ಸಿನಿಮಾ ರಿಲೀಸ್‌ಗೂ ಮುನ್ನ ವಿಜಯ್ ತಾಯಿ ನೋಡಿ ಬೆಚ್ಚಿ ಬಿದ್ದಿದ್ದಾರೆ.

ನನಗೆ ಹೇಳದೇ ಮದುವೆ ಕೂಡ ಮಾಡಿಕೊಂಡಿದ್ದೀಯಾ ಎಂದು ಸಿಟ್ಟಾಗಿದ್ದರಂತೆ, ಈ ಬಗ್ಗೆ ವಿಜಯ್ ಸಂದರ್ಶನವೊಂದರಲ್ಲಿ ಹೇಳಿಕೊಂಡು ನಕ್ಕಿದ್ದಾರೆ. ಶೀಘ್ರವೇ ತಮನ್ನಾ ಹಾಗೂ ವಿಜಯ್ ಮದುವೆ ಮಾತುಕತೆ ಆರಂಭವಾಗಲಿದ್ದು, ಜೋಡಿ ಹಸೆಮಣೆ ಏರಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!