ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ವಿಜಯ್ ರಾಘವೇಂದ್ರ ಎಲ್ಲಿಗೆ ಹೋದರೂ ಪತ್ನಿಯನ್ನು ಹಾಡಿ ಹೊಗಳುತ್ತಿದ್ದರು. ವಿಜಯ್ ಕಣ್ಣಿನಲ್ಲಿ ಪತ್ನಿಯೆಡೆಗಿನ ಪ್ರೀತಿ, ಗೌರವ ಎದ್ದು ಕಾಣಿಸುತ್ತಿತ್ತು. ಹೆಂಡತಿ ಮೇಲೆ ಜೀವ ಇಟ್ಟಿದ್ದ ವಿಜಯ್ ಈಗ ಹೇಗೆ ಜೀವನ ನಡೆಸುತ್ತಾನೆ ಎಂದು ಹಿರಿಯ ನಟಿ ಗಿರಿಜಾ ಲೋಕೇಶ್ ಕಣ್ಣೀರಿಟ್ಟಿದ್ದಾರೆ.
ರಾಘು ಜೀವನ ಮುಂದೆ ಹೇಗೆ? ನನಗೂ ವಿಷಯ ಗೊತ್ತೇ ಇರಲಿಲ್ಲ ಎಂದಿನಂತೆ ಶೂಟಿಂಗ್ ಮುಗಿಸಿ ಬಂದು ಕುಳಿತಿದ್ದೆ. ಸೊಸೆಯಿಂದ ವಿಚಾರ ತಿಳಿಯಿತು, ಯಾವುದೋ ಸುಳ್ಳು ಸುದ್ದಿ ಇರಬೇಕು ಎಂದು ಹೇಳಿದೆ. ನನಗೆ ನಂಬಲು ಆಗಲೇ ಇಲ್ಲ. ನಮ್ಮ ಕಣ್ಣೆದುರು ಇದ್ದ ಚಿಕ್ಕ ವಯಸ್ಸಿನ ಹುಡುಗಿಯರಿಗೆ ಹೀಗಾದರೆ ಮನಸ್ಸಿಗೆ ನೋವಾಗುತ್ತದೆ.
ರಾಘು-ಸ್ಪಂದನಾ ಪ್ರೀತಿಯನ್ನು ದೇವರು ಸಹಿಸಲಿಲ್ಲ, ಇದು ಅನ್ಯಾಯ. ಹೆಣ್ಣಿಲ್ಲದ ಮನೆಯನ್ನು ಊಹಿಸೋಕೂ ಆಗೋದಿಲ್ಲ. ಪ್ರತಿಯೊಂದಕ್ಕೂ ಸ್ಪಂದನಾ ಮೇಲೆ ಡಿಪೆಂಡ್ ಆಗಿದ್ದ ರಾಘೂ ಅವನ ನೋವು ಯಾರಿಗೂ ಬಾರದಿರಲಿ ಎಂದಿದ್ದಾರೆ.